ಹಮೀದಾ ಬೇಗಂ ದೇಸಾಯಿ ಕವಿತೆ- ನೆರಳುಗಳು…

ಕಾವ್ಯ ಸಂಗಾತಿ

ನೆರಳುಗಳು…

ಹಮೀದಾ ಬೇಗಂ ದೇಸಾಯಿ

ನನ್ನ ನೆರಳು , ನಿನ್ನ ನೆರಳು,
ಅವನ ನೆರಳು, ಅವಳ ನೆರಳು,
ಆ ದೂರದ ಕಂಬದ ನೆರಳು,
ಬಂಗಲೆಯ, ಗುಡಿಸಲಿನ ನೆರಳು
ಎಲ್ಲವೂ ಒಂದೇ…
ಕಪ್ಪು ಕಪ್ಪಾದ ನೆರಳುಗಳು..

ಮಾನ್ಯ ಮಂತ್ರಿಗಳ ನೆರಳುಗಳು,
ಶ್ರಮಿಕ, ರೈತರ ನೆರಳುಗಳು,
ಹದಿಹರೆಯದ, ಮುಪ್ಪಾದ ನೆರಳುಗಳು
ಕಪ್ಪು…ಕಡುಗಪ್ಪು..!

ಹಿಂದೂವಿನ ನೆರಳು,
ಮುಸಲ್ಮಾನನ ನೆರಳು,
ಸಿಖ್ಖ, ಕ್ರಿಶ್ಚಿಯನ್ನರ ನೆರಳುಗಳು
ಛೇ..ಎಲ್ಲವೂ ಕಪ್ಪು ಕಪ್ಪು…

ಗೀತೆ, ಕುರಾನ್ ಗಳ,
ಬೈಬಲ್, ಗ್ರಂಥ ಸಾಹಿಬಾ,
ಇವುಗಳ ನೆರಳುಗಳು ಎಲ್ಲಿ..?
ಮಸೀದಿ, ಚರ್ಚಗಳ,
ಮಂದಿರ, ಗುರುದ್ವಾರಗಳ,
ನೆರಳುಗಳು ;
ಜಾತಿ ಮತ ಪಂಥಗಳ
ನೆರಳುಗಳು ಯಾಕಿಲ್ಲ ಬೇರೆ ಬೇರೆ…?
ನೆರಳಿಲ್ಲದ ಪರಿಶುದ್ಧ ಪ್ರೇಮ
ಇರುವುದೊಂದೇ ಮಾನವೀಯತೆ…!


ಹಮೀದಾ ಬೇಗಂ ದೇಸಾಯಿ

Leave a Reply

Back To Top