ಕಾವ್ಯ ಸಂಗಾತಿ
ಮುಂಗಾರು ಸಿಂಚನ
ಪ್ರಭಾ ಅಶೋಕ ಪಾಟೀಲ
ಮೇಘರಾಜನ ಒಡಲಿಂದ ಹನಿಯಾಗಿ ಸುರಿದೈತೆ
ಬಾಯಾರಿದ ಭೂತಾಯ ಒಡಲದು ತಣಿದೈತೆ
ಎಲ್ಲೆಲ್ಲೂ ಹಸಿರು ಉಕ್ಕಿ ನಲಿದೈತೆ
ರೈತನ ಮೊಗದಲ್ಲಿ ಸಂತಸವು ತುಂಬೈತೆ
ನವಿಲದೊ ಘ ರಿ ಬಿಚ್ಚಿ ಕುಣಿದೈತೆ
ಇಳೆ ಯ ಕೊಳೆಯಲ್ಲ ತೊಳೆದು ಹೋಗೈತೆ
ಮಂಜು ಹನಿಗಳ ಹೊದ್ದು ಹೂವದು ನಗುತೈತೆ
ತಂಪಾದ ತಂಗಾಳಿ ಎಲ್ಲೆಲ್ಲೂ ಸುಳಿದೈತೆ
ದುಮ್ಮಿ ಕ್ಕಿ ಜಲಪಾತ ಜುಳು ಜುಳು ಹರಿದೈತೆ
ಹಾಲ ಕಡಲ ನೊರೆಯಂತೆ ಸಾಗರವು ಕುಣಿದೈತೆ
ಪ್ರೇಮಿಗಳ ಮನವದು ತಕತೈ ಕುಣಿತೈತೆ
ರಸಿಕತೆಯ ರಂಗೋಲಿ ಎಲ್ಲೆಲ್ಲೂ ಮೂಡೈತೆ
ಬಾನ ಲಿ ಕಾಮನ ಬಿಲ್ಲದು ತುಂಟಾಟ ಮಾಡೈತೆ
ಸಪ್ತ ವರ್ಣದಲ್ಲಿ ಮಿಂದು ಕಿರುನಗೆಯ ಸೂಸೈತೆ
ಹಕ್ಕಿಗಳು ಸಂತಸದಿ ಚಿಲುಪಿಲಿಯ ರಾಗವ ಹಾಡೈತೆ
ಮುಂಗಾರು ಬಂದೈತೆ ಮನವದು ತಣಿ ದೈತೆ
ಪ್ರಭಾ ಅಶೋಕ ಪಾಟೀಲ
Super duper