ಕಾವ್ಯ ಸಂಗಾತಿ
ಇನ್ನೊಂದು ಪುಟ ಬರೆಯುವೆನು
ಪ್ರಮೋದ ಜೋಶಿ
ಅವಳು ಕವಿತೆ ನಾನು ಚರಿತೆ
ಬಾಳೆ ಒಂದು ಗ್ರಂಥವು
ಅವಳ ಒಲವು ನನ್ನ ಗೆಲುವು
ಇದುವೇ ಗ್ರಂಥದ ಒಳಸುಳಿವು
ಪ್ರೀತಿ ಕುಸುಮಗಳ ತೋಟವು
ನನ್ನೀ ಪುಟ್ಟ ಕುಟೀರವು
ಕ್ಷಣ ಕ್ಷಣವೂ ಆಸ್ವಾದಿಸುವ
ಉಸ್ತುವಾರಿಕೆ ಮಾಲಿ ನಾನು
ನನ್ನ ಕನಸಿಗೆ ನಿದಿರೆ ನೀನು
ನಿನ್ನೇ ಕಾಣುವೆ ಕನಸಿನೊಳು
ನಿನ್ನ ಬಿಟ್ಟು ಇರುದೇನು
ಉಸಿರಾಗಿಹೆವು ನಾನು ನೀನು
ಗಂಟ ಹಾಕಿ ಕಳಿಸಿದ ಬೊಮ್ಮ
ಒಂದಾಗಿ ಮಾಡುತ ನಮ್ಮ
ಅವನ ಕೋರಿಕೆ ನಿಭಾಯಿಸುವುದೇ
ನಮ್ಮ ಬಾಳಿನ ಧರ್ಮ
ಅವಳ ಗೆಲುವೋ ನನ್ನ ಗೆಲುವೋ
ಎಲ್ಲ ಒಂದೇ ಬಾಳಿನಲಿ
ಯಾರೇ ಗೆದ್ದರೇನಂತೆ
ದೊರೆವ ಕಾಣಿಕೆ ನಮ್ಮದೇನೆ
ಚರಿತೆಯೊಳು ಕಾವ್ಯ ಸೇರಿಸಿ
ಪುಟವಾಗಿ ಕಟ್ಟಿಹೆನು
ದಿನಕ್ಕೊಂದು ಪುಟ ಸೇರಿಸಿ
ಗ್ರಂಥ ಮಾಡಿ ಇಟ್ಟಿಹೆನು
ನಿತ್ಯವೂ ಇದನು ಓದುತ
ಜೀವದ ರಸಮಯ ಸವೆಯುವೆನು
ನಿನ್ನ ನನ್ನ ಪ್ರೀತಿ ಅರಿತು
ಮತ್ತೆ ನಿನ್ನ ಸೇರುವನು
ಇನ್ನೋಂದು ಪುಟ ಬರೆಯುವೆನು
ಪ್ರಮೋದ ಜೋಶಿ