ಕಾವ್ಯ ಸಂಗಾತಿ
ಕಡತ
ಡಾ ಶಶಿಕಾಂತ ಪಟ್ಟಣ ರಾಮದುರ್ಗ
ಕಾರ್ಟೂನ್ ಕೃಪೆ- ಆರ್. ಕೆ.ಲಕ್ಷ್ಮಣ್ ಗೂಗಲ್
ಗೆಳೆಯರೇ
ಪ್ರಜಾವ್ಯವಸ್ಥೆಯ
ಬಲು ದೊಡ್ಡ ನಾಟಕ
ಸದನರಂಗವಿದು
ಹೆಸರು ಕರ್ನಾಟಕ
ಆಡಳಿತ ವಿರೋಧ ಪಕ್ಷಗಳ
ಗುದ್ದಾಟ ಕಿರುಚಾಟ
ಶಾಸನ ಸಭೆಯಲ್ಲಿ
ಸದ್ದು ಗದ್ದಲ
ಇಲ್ಲಿಯೂ ಹಲವಾರು
ಮಲಗುತ್ತಾರೆ ತೂಕಡಿಸುತ್ತಾರೆ
ಪಾಪ ರಾತ್ರಿಯಿಡಿ
ಹೆಂಡ ಇಸ್ಪೀಟ್ ದಾಸರಾಗಿ
ಭ್ರಷ್ಟತೆಯ ತನಿಖೆ
ಆರೋಪ ಪ್ರತ್ಯಾರೋಪ
ಕಮಿಷನ್ ದಂದೆ
ಆಕ್ರಮ ಸಕ್ರಮ ಒತ್ತುವರಿ
ನೂರಾರು ಕೋಟಿ ಹಗರಣ
ಡ್ರಗ್ಸ್ ಮಾಫಿಯಾ
ಮರಳು ಮಾರಾಟ
ಗಣಿ ಲೂಟಿ ಟ್ರಾನ್ಸ್ಫರ್
ನೇಮಕಾತಿಯಲ್ಲಿ ಲಂಚ
ಕೆಲ ನಾಯಕರು
ಪಕ್ಷದಿಂದ ಪಕ್ಷಕ್ಕೆ
ಕೋತಿಗಳಂತೆ ಜಿಗಿಯುತ್ತಾರೆ
ಹೀಗಾಗಿ ಅವರು ಹರಿಶ್ಚಂದ್ರರಂತೆ
ಭಾಷಣ ಮಾಡುತ್ತಾರೆ
ಶೂನ್ಯ ವೇಳೆ ಗಂಭೀರ ಚರ್ಚೆ
ಕೊಳ್ಳೆ ಹೊಡೆದರು ಲೂಟಿ
ಮಾಡಿದರು ವ್ಯಾಪಾರ ವ್ಯವಹಾರ
ಟಿಕೆ ಟಿಪ್ಪಣಿ ಇವೆಲ್ಲವನ್ನೂ
ಕಡತದಿಂದ ತೆಗೆಯಲು ಒತ್ತಡ
ಇವರು ಅವರ ಮೇಲೆ
ಅವರು ಇವರ ಮೇಲೆ
ಆರೋಪಗಳ ಸೂರಿ ಮಳೆ
ಎಲ್ಲರೂ ಸಾಚಾ ಭಕ್ತರು
ಸಂವಿಧಾನವಲ್ಲದ ಪದಗಳ ಬಳಕೆ
ಕಡತದಿಂದ ತೆಗೆಯಲು
ಆಡಳಿತ ವಿರೋಧ ಪಕ್ಷಗಳ
ನಿರಶನ ಉಪವಾಸ ಧರಣಿ
ಬಾವಿಗಿಳಿದು ಒತ್ತಾಯ
ಸಭಾಧ್ಯಕ್ಷರ ಸೂಚನೆ
ಹತ್ತು ನಿಮಿಷ ಸಭೆ ಕಲಾಪ ಮುಂದೂಡಿಕೆ
ಮತ್ತೆ ಕಲಹ ಸದನ ಗದ್ದಲ
ಘೋಷಣೆ ಕಿರುಚಾಟದ ಸಪ್ಪಳ
ಕಡತದಿಂದ ತೆಗೆದಿರಬಹುದು
ಪದಗಳನ್ನು ಆರೋಪಗಳನ್ನು
ಆದರೆ ಇವರನ್ನು ನೋಡುವ
ಯು ಟ್ಯೂಬ್ ಚಾನೆಲ್ ದೃಶ್ಯಾವಳಿ
ತೆಗೆಯಲಾಗದು
ತಪ್ಪು ಖಂಡಿತ ಇವರದ್ದಲ್ಲ
ಹಣ ಹೆಂಡ ಆಮಿಷಕ್ಕೆ ಮಾರಿಕೊಂಡ
ಮತದಾರ ಪ್ರಭುಗಳು
ಕ್ಷಮಿಸಿ ದಾಸರು
ಕಿತ್ತೊಗೆಯಬೇಕಾದದ್ದು
ಕಡತದಿಂದಲ್ಲ
ಶಾಸನ ಸಭೆಯಿಂದ
ಇಂತಹ ಭ್ರಷ್ಟ ಶಾಸಕ
ರಾಜಕಾರಣಿ ಮಂತ್ರಿಗಳನು
ಡಾ ಶಶಿಕಾಂತ ಪಟ್ಟಣ ರಾಮದುರ್ಗ
Excellent poem
ತುಂಬಾ ನಿಷ್ಠುರವಾಗಿ ನೇರವಾಗಿ ಹರಿತವಾದ ಶಬ್ದಗಳ ಪ್ರಯೋಗ ಮಾಡಿ ವಾಸ್ತವಿಕತೆಯ ಅನಾವರಣ ಮಾಡಿದ್ದೀರಿ, ಅತ್ಯುತ್ತಮ ಸುಂದರ ಅಭಿವ್ಯಕ್ತಿ
ಕ್ರಾಂತಿಕಾರಿ ಕವಿ
ಪ್ರಜಾವ್ಯವಸ್ಥೆಯ ಬಲು ದೊಡ್ಡ ನಾಟಕವನ್ನು ನಿಮ್ಮ ಮೊನಚು ವಾಗ್ಭಾಣದಿಂದ ಸಾರಾಸಗಟಾಗಿ
ಹಿಂದು ಮುಂದೆ ನೋಡದೆ ನಿಮ್ಮ ಕವನದ ಮೂಲಕ ಬಿಚ್ಚಿಟ್ಟಿದ್ದೀರಿ…. ಇದನ್ನೆಲ್ಲ ಹೇಳಲು ಗಟ್ಟಿತನದ ಎದೆಗಾರಿಕೆ ಬೇಕು
ಸತ್ಯದ ಅನಾವರಣದ ನಿಷ್ಟುರ ಧ್ವನಿ
ಕ್ರಾಂತಿಕಾರಿ ಕವನ ಎಂತಹ ಸುಂದರ ಭಾವ ಪ್ರಜ್ಞೆ
ಹಣ ಆಮಿಷಕ್ಕೆ ಮಾರಿಕೊಂಡ ಮತದಾರ ಪ್ರಭುಗಳು…ಕ್ಷಮಿಸಿ ದಾಸರು….
ತೆರೆದಿಟ್ಟ ಸತ್ಯ….. ಬಂಡೆದ್ದ ಕವಿ ಮನದ ದಿಟ್ಟ ಧ್ವನಿ….ಸತ್ಯದ ಅನಾವರಣ…. ಆತ್ಮ ಸಾಕ್ಷಿ ಮಾರಿಕೊಂಡ ಮತದಾರ….ಚಾಟಿಯೇಟಿನ ಕವಿತೆ..
Very good poem Sir
ಉತ್ತಮ ಕ್ರಾಂತಿಕಾರಿ ಕವನ