ಕಾವ್ಯ ಸಂಗಾತಿ
ಕಂಚುಗಾರನಹಳ್ಳಿ ಸತೀಶ್
ಸಾವು
ಸಾವು ಅಂತಿಮ
ಆಸ್ತಿ ಅಂತಸ್ತು ನಿರ್ನಾಮ
ಅರಿಶಿಣ ಕುಂಕುಮ
ಹೆಣ್ಣಿಗೆ ಸಂಗಮ
ಸತ್ತವನು ಎದ್ದು ಬಂದಾಗ
ನಿಜ ತಿಳಿಯುವುದು
ಸತ್ತ ಮೇಲೆ ಅಳುವುದು
ನೆಪಮಾತ್ರ ಪ್ರಕೃತಿಯ ನಿಯಮ
ಸಾಯದೆ ಸ್ವರ್ಗ ನೋಡುವವನೇ
ನೈಜ ಮಾನವ
ಸತ್ತ ಮೇಲೆ ಉಳಿಯಬೇಕೆನ್ನುವುದು
ಅವನ ಭ್ರಮನಿರಸನ
ಸತ್ತರೂ ಬದುಕಿರುವವನು
ಅಮರ ಎಂದೂ ಮರೆಯಲಾಗದು
ಅವನ ಜೀವನ ಸರಳತೆಯಿಂದ ಸಾಧಿಸಿದವನೇ ಯಜಮಾನ
——————
ಕಂಚುಗಾರನಹಳ್ಳಿ ಸತೀಶ್
What a lines suuuuper