ಪ್ರತಿಭಾ ಪಾಟೀಲ ಕವಿತೆ-ಅವಳೆಂಬ ಅಸ್ತಿತ್ವದ ಗುಟ್ಟು ಈ ಮುಟ್ಟು

ಕಾವ್ಯ ಸಂಗಾತಿ

ಪ್ರತಿಭಾ ಪಾಟೀಲ

ಅವಳೆಂಬ ಅಸ್ತಿತ್ವದ ಗುಟ್ಟು ಈ ಮುಟ್ಟು

ಯಾರಿಂದ ಮುಚ್ಚಿಕೊಳ್ಳಬೇಕು
ಆ ಗಾಢ ಕೆಂಪು ಕಲೆಯನ್ನು
ಬಚ್ಚಿಟ್ಟು ಮುಚ್ಚಿಟ್ಟು
ಮರೆಮಾಚುವದಲ್ಲ ಮುಟ್ಟು

ಹೆಣ್ಣನ್ನು ಹೆಣ್ಣಾಗಿಸುವ
ಋತುಚಕ್ರದಲ್ಲಿ ತಿರುಗಿಸುವ
ಮೊಡವೆ ತುಂಬಿದ ಮುಖದಲ್ಲಿ
ಪ್ರೌಢಾವಸ್ತೆಯ ಬಿಂಬವೆ ಈ ಮುಟ್ಟು

ಅವಳ ಗರ್ಭಾಶಯದ ಒಳಪಸೆಯನ್ನು
ರಕ್ತಸ್ರಾವದ ಜೊತೆ ಹೊರ ಹಾಕಲು
ತಿಂಗಳಿಗೊಮ್ಮೆ ತಡಮಾಡದೆ ನೋವ ನೀಡಲು
ಬರುವ ಅವಳದೇ ದೇಹದ ಅತಿಥಿ ಈ ಮುಟ್ಟು

ಮುಟ್ಟಿನ ಮುದ್ದೆಯೊಂದಕ್ಕೆ
ಕೈ ಕಾಲು ಮುಖವೆಲ್ಲ ಮೂಡಿ
ಮಾಣಿಕ್ಯ ಒಂದು ಅಲ್ಲಿ ಮಿಂಚಿನಂತೆ ಮಾಡಿ
ಸಂತಸದ ಹೊನಲು ಹರಿಸುವದು ಇದೇ ಮುಟ್ಟು

ಪ್ರಕೃತಿಯ ನಿಯಮ, ಪ್ರಾಯದ ಗುಣವು
ಅವಳ ಅಂತರಂಗದಲ್ಲಿನ ಕೋಲಾಹಲವು
ಅವಳು ಅವಳೆಂಬ ಅಸ್ತಿತ್ವದ ಗುಟ್ಟು
ಹೆಣ್ತನದ ಗಟ್ಟಿತನವು ಈ ಮುಟ್ಟು


ಪ್ರತಿಭಾ ಪಾಟೀಲ

9 thoughts on “ಪ್ರತಿಭಾ ಪಾಟೀಲ ಕವಿತೆ-ಅವಳೆಂಬ ಅಸ್ತಿತ್ವದ ಗುಟ್ಟು ಈ ಮುಟ್ಟು

  1. ಹೆಂಡತನದ ಆಸ್ಮಿತೆಯನ್ನು ಬಿಂಬಿಸುವ ಕವಿತೆ ಸುಂದರವಾಗಿದೆ

    1. ಹೆಣ್ಣಿನ ಮುಟ್ಟಿನ ಬಗ್ಗೆ ಚೆನ್ನಾಗಿ ಮೂಡಿ ಬಂದ ಕವನವಿದು ತಾಯಿತನಕ್ಕೆ ಮೂಲ ಕಾರಣ ಇದು ಹೆಣ್ಣಿನ ಅಂಡಾಣು ಬಿಡುಗಡೆ ಆಗಲು ಮುಟ್ಟು ಅವಶ್ಯ ಹೆಣ್ಣಿನ ಅಂಡಾಣು,ಗಂಡಿನ ರೆತ್ರಾಣು ಸೇರಿದಾಗ ಭ್ರೂಣ ನಿರ್ಮಾಣ ಆಗುತ್ತದೆ

  2. ಹೆಣ್ಣುತನ ಆಗಬೇಕು ದಯವಿಟ್ಟು ಕ್ಷಮಿಸಿ

  3. ಮೇಡಂ ಬಹಳ ಸುಂದರ ಕವನ. ತನುವಿನ ಮುಟ್ಟು ಮನ ಮುಟ್ಟಿತು.

  4. ಮುಟ್ಟನ್ನು ಎಷ್ಟು ಚೆನ್ನಾಗಿ ಬಿಂಬಿಸಿದ್ದೀರಿ ಮೇಡಂ!!ಅಭಿನಂದನೆಗಳು.

  5. ಕವನವನ್ನು ಮೆಚ್ವಿದ ತಮಗೆಲ್ಲರಿಗೂ ಅನಂತ ವಂದನೆಗಳು

  6. ಸುಂದರವಾಗಿದೆ. ಹೆಣ್ತನದ ಸಂಕೇತ ಈ ಮುಟ್ಟು ಅನ್ನೋದನ್ನ ವರ್ಣಿಸಲಾಗಿದೆ.

Leave a Reply

Back To Top