ಕಾವ್ಯ ಸಂಗಾತಿ
ದ್ವಿಪದಿಗಳು
ಲಲಿತಾ ಪ್ರಭು ಅಂಗಡಿ
ನಗುಮುಖದ ನಿನ್ನ ಹೊಳಪಿನ ಚಿತ್ರ
ರಚಿಸಿಬಿಟ್ಟ ಕಲಾವಿದ ಮಿತ್ರ
ನೀ ನಕ್ಕಾಗ ನಿನ್ನ ಕೆನ್ನೆಯ ಗುಳಿ
ಅವನಿಗೇನು ಮುಜುಗರದ ಕಚಗುಳಿ
ನಕ್ಕಾಗ ನಿನ್ನ ದಂತಪಂಕ್ತಿ ಸಾಲು
ಅವನಿಗೇನೊ ಆನಂದ ಅತಿರೇಕದಮಲು
ನಿನ್ನ ಕಣ್ಣಿನ ರೆಪ್ಪೆಯ ಹೊಳಪು
ಕೆದರಿಸಿಬಿಟ್ಟಾವ ಅವನ ಕ್ರಾಪು
ತುಟಿಯಂಚಿನ ನಿನ್ನ ಮುಗುಳ್ನಗೆ
ಸೆಳೆದಾವ ಅವನಿಗೆ ಬಾವಬೆಸುಗೆ
ನಿನ ನಗೆಯ ನಂದಾದೀಪದ ಬೆಳಕ
ತೋರಿಸಿಬಿಟ್ಟ ಅವ ಜಗಕ
ಲಲಿತಾ ಪ್ರಭು ಅಂಗಡಿ