ಮರುಳಸಿದ್ದಪ್ಪ ದೊಡ್ಡಮನಿ ಕವಿತೆ-ಬಾ ಮಳೆರಾಯ

ಕಾವ್ಯ ಸಂಗಾತಿ

ಬಾ ಮಳೆರಾಯ

ಮರುಳಸಿದ್ದಪ್ಪ ದೊಡ್ಡಮನಿ

ಧರಣೆಲ್ಲಾ ದಣದಾಳ ಕರುಣದಿಂದಲಿ ಕರುಣಿಸು
ನೆಲವೆಲ್ಲ ಹಸಿಯಾಗಲಿ
ನಿನ್ನೊಳಗಿನ ಬಿಂಕ ಬಿಡು

ಕಂಕಿ ಬೆಳೆಯಲು ಕೊಂಕವೇಕೆ
ಸುಂಕದ ಕಾಳು ಹಕ್ಕಿ ಪಾಲು
ನೆಲದವ್ವನ ಉಡಿದುಂಬಿದರ
ಹಸನಾದಾವು ನಮ್ಮ ಬಾಳು

ನಮ್ಮ ನೀಚತನಕ ನಾಚ್ಯಾಕ
ಸುಮ್ಮನ ಕುಂತಿದಿ ಹೇಳು
ನಿನ್ನನ್ನ ಬಗೆ ಬಗೆದು
ಬದುಕ ನಡೆಸಿವಿ ಕೇಳು

ಧನ ದಾಹಕ ನಿನ್ನ ಸೆರಗ ಬಿಚ್ಚಿ
ಮಾನ ಮಾರಿ ಬಾಳ್ವೆ ಮಾಡಿವಿ
ಕಳಕೊಂಡ ಕಸುವ ಹುಡಿಕ್ಯಾಡಿ
ದಿನ ದಿನವು ಸತ್ತೇವಿ

ನಿನ್ನ ಮುನಿಸಿಗೆ ನಾವ್ಹೆಂಗ
ಈ ಲೋಕದಾಗ ಬದುಕತಿವಿ
ನಿನ್ನ ಅಂಗಲಾಚಿ ಬೇಡುವೆ
ಧರೆಗಿಳಿದು ಬಂದರ ನಾವು
ಉಳಿತಿವಿ.


ಮರುಳಸಿದ್ದಪ್ಪ ದೊಡ್ಡಮನಿ


Leave a Reply

Back To Top