ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಇಳೆಗೆ ಮಳೆ , ಮಗ

ಡಾ ಡೋ.ನಾ.ವೆಂಕಟೇಶ

ಮಳೆಗಾಲದಾರಂಭ ತುಂಬ
ಗುಡುಗು ಸಿಡಿಲಿನಾರ್ಭಟ
ದಣಿದ ದೇಹಕ್ಕೆ ತನುವು!

ಧರೆಗೆ ಬಿದ್ದೊಡನೆ ನೀರು
ಧಬಧಬಿಸಿ ಮನ ಮನೆ
ಸಂತೃಪ್ತಿಯ ಪರಾಕಾಷ್ಠೆ

ಮುಂದಡಿಯಿಟ್ಟಂತೆ ಮಳೆಗಾಲ
ಜಡಿಮಳೆ ಸೋನೆಮಳೆ
ತಂಪಾಗಿಸಿ ಇಳೆಯ
ಸಂಭ್ರಮ
ಸಂಗೀತ ಮೇಳ
ಹಚ್ಚ ಹಸಿರಿನ ಹೊನಲು

ಹುಟ್ಟುತ್ತ ಹುಟ್ಟುತ್ತಾ ಜೀವ
ಆಸೆ ಆಕಾಂಕ್ಷೆ ಹೊತ್ತ ವೇದನೆ
ದಣಿದ ದೇಹಕ್ಕೆ ತನುವು!

ಧರೆಗೆ ಬಿದ್ದೊಡನೆ ಜೀವ
ಧಬಧಬಿಸಿ ಮನ ಮನೆ-
ಹೌದು
ಸಂತೃಪ್ತಿಯ ಪರಾಕಾಷ್ಠೆ

ಜೀವ ಬೆಳೆಯುತ್ತ
ಚಂದ್ರ ಇಂದ್ರ ತಂಪಾಗಿಸಿ
ಆಸೆ ಕಣ್ಗಳ ತಾಯಿಗೆ
ಸಂಭ್ರಮದ ಹೊನಲು!

ಇಳೆಗಿಳಿದ ಮಳೆಗೂ
ಧರೆಗಿಳಿದ ಮಗನಿಗೂ
ಬಾರದಿರಲಿ ಬರಗಾಲ
ಈ ಚಂದ್ರ ಇಂದ್ರರಿಗೆ ,
ಮಳೆ ಬೆಳೆಗೆ!

ನಮ್ಮೂರ ಕಡೆ ಹಳೆ ಗಾದೆ-
“ಮಗ ಉಂಡರೆ ಕೇಡಲ್ಲ
ಮಳೆ ಬಂದರೆ ಕೇಡಲ್ಲ”

ಇರಲಿ ಸುಭಿಕ್ಷೆ ಸುಧರ್ಮ!


ಡಾ ಡೋ.ನಾ.ವೆಂಕಟೇಶ


About The Author

8 thoughts on “ಡಾ ಡೋ.ನಾ.ವೆಂಕಟೇಶ-ಇಳೆಗೆ ಮಳೆ , ಮಗ”

  1. ಭಾರೀ ಮಳೆಯಾಗುತ್ತಿರುವ ಈ ಸಂದರ್ಭದಲ್ಲಿ ನಿಮ್ಮ ಕವಿತೆ ಸಮಯೋಚಿತವಾಗಿದೆ ಮತ್ತು ನಾವೆಲ್ಲರೂ ಆನಂದಿಸುವ ಸಂತೋಷವನ್ನು ಮತ್ತು ಇಡೀ ಪ್ರಕೃತಿಗೆ ಅದರ ಉಪಯುಕ್ತತೆಯನ್ನು ನೀವು ಸುಂದರವಾಗಿ ವಿವರಿಸಿದ್ದೀರಿ. ಧನ್ಯವಾದಗಳು

    1. D N Venkatesha Rao

      Yes shiva,Rain is always a pleasure. When it use to rain heavily we were enjoying boats – “real and paper”!
      ಧನ್ಯವಾದಗಳು ಶಿವ ಶಂಕರ!

Leave a Reply

You cannot copy content of this page

Scroll to Top