ರೇಷ್ಮಾ ಕಂದಕೂರ ಕವಿತೆ-ಕಲ್ಲು ಕರಗಿಸಿ ಬಿಡಿ

ಕಾವ್ಯ ಸಂಗಾತಿ

ಕಲ್ಲು ಕರಗಿಸಿ ಬಿಡಿ

ರೇಷ್ಮಾ ಕಂದಕೂರ

ಕರಗಿಸಿ ಬಿಡಿ ಕಲ್ಲು
ಒಲವ ಮೆಲ್ಲುಸಿರಲಿ
ಸಂಬಂಧಕೆ ಗಂಧ ತೀಡಿ
ಅನುರಾಗದ ಕಂಪು ಪೂಸುತ.

ಸ್ವಾರ್ಥದ ಓಕುಳಿಯಲಿ
ಮಿಂದೆದ್ದ ಮನವೇ
ಕೂಡಿ ಕಳೆವ ಲೆಕ್ಕಾಚಾರ ಏಕೆ
ಒಂದುಗೂಡುವ ಮಳೆಗರೆದು ಬಿಡು.

ಕೊಚ್ಚಿ ಹೋಗಲಿ ರಭಸಕೆ
ಮೈಮನವ ತೊಳೆಯಲು
ಕೊಚ್ಚೆ ಪಾಚಿಗೆ ನಾಚಿಕೆಯಾಗಲಿ
ರಚ್ಚೆ ಬಿಡದ ಮಳೆ ಬೆಚ್ಚಿ ಬೀಳಿಸಲಿ.

ಕರಗಲು ಬಿಡಿ
ದುಷ್ಟ ಶಕ್ತಿಗಳ ನಿವಾರಿಸಲು
ಮುಷ್ಟಿ ಬಿಗಿತವ ಸಡಿಲಿಸಿತ
ಹಗೆತನವ ಮೆಟ್ಟಿ ನಿಲ್ಲಲು.

ಅದೆಷ್ಟು ಕಾತರದಿ
ಬಾಧೆಗೊಳಪಡುವುದನ ತಪ್ಪಿಸಲು
ತಪ್ಪನು ತಿದ್ದುವುದಕೆ
ಸಿದ್ಧತೆಯಲಿ ಮನ್ನಡೆ.

ಚೆಲ್ಲಾಟ ವಬೇಡ
ಒಡನಾಟ ಸಾಕು
ವಸುದೈವ ಕುಟಂಬಕೆ
ನಸು ನಗುತ್ತಲೇ ಸಾಗು ಸಾಕು.

ಬಂದೇ ಬರಲಿ
ಕುಂದು ತಾಗದಂತೆ
ಕಲ್ಲು ಕರಗಿಸುವ ತವಕಕೆ
ಮಂದಹಾಸದ ನಗೆ ಬೀರಲಿ.

————-

ರೇಷ್ಮಾ ಕಂದಕೂರ

2 thoughts on “ರೇಷ್ಮಾ ಕಂದಕೂರ ಕವಿತೆ-ಕಲ್ಲು ಕರಗಿಸಿ ಬಿಡಿ

  1. ಕಲ್ಲು ಕರಗದು ಮನವು ಹಾಯಾಗದು.ಆಗುವುದು ತದ್ವಿರುದ್ಧ. ನಂಬಿಕೆಯ ನೆಲೆಯನರಸಿ.

Leave a Reply

Back To Top