ಕಾವ್ಯ ಸಂಗಾತಿ
ಮುಳುಗಿಸದಿರು ಬದುಕು
ಇಮಾಮ್ ಮದ್ಗಾರ
ಸಾವಿರಾರು ವರ್ಷಗಳಿಂದ ನಿಂತು ನಿಂತು ಬೆಟ್ಟ ಗುಡ್ಡಕ್ಕೂಬೋರಾಗಿತ್ತನೋ ಸೊಂಟ ಉಳಿಕಿರ ಬಹುದು ಸರ್ರನೆ ಜಾರಿವೆ ಬಯಲು ಬಯಲಾಗುತಿವೆ
ಭಾನು ಬಂದಾಗಿ ನಿಂದ
ಸಾಗಿ ಸಾಗಿ ಆ ಮೋಡ
ಗಳಿಗೂ ಸಾಕಾಗಿತ್ತೇನೋ.
ಕಸುವು ಕಳೆದುಕೊಂಡ ಕಾಲು ಜಾರಿವೆ ಭೂಮಿಗೆ ಬಂದೆರಗಿವೆ..
ಸೊರಗದೆ ಕರಗದೆ
ನಿಂತಲ್ಲಿ ನಿಂತು ನಿಂತು..
ಸಾಗರ ಗಳಿಗೂ.. ಕಾಲು ನೋವಾಗಿತ್ತೇನೋ..
ಸಾಗಿ ಬಂದೇ ಬಿಟ್ಟವು
ನದಿಗಳ ಗಮ್ಯದೆಡೆಗೆ
ಸರ್ವವನ್ನು ಸೃಷ್ಟಿಸಿದ
ಆ..ಕ್ಷಣದಿಂದ ಎವೆ ಯಿಕ್ಕದೆ
ಕಾಯುತ್ತಾ ಕಾಪಾಡುತ್ತಾ
ಬಂದ ಆ …ನಿರಾ ಕಾರಿಗೂ
ನಿದ್ದೆ ಬಂದಿತ್ತೇನೋ
ಅರೆಕ್ಷಣ ಮಲಗಿರ ಬಹುದು
ಎಲ್ಲೆಲ್ಲೂ ನೀರೆ ನೀರು
ಬಯಲೇ ಬಯಲು
ಗುಡ್ಡಗಳು ಬಗ್ಗಿವೆ.
ಅಂಗಳಗಳು ಅಗಲವಾಗಿ ಅಂಗುಲ ಅಂಗಲವನ್ನೇ ನುಂಗಿವೆ ..ಮುಗಿಲಿಗೆ ಮುತ್ತಿಕ್ಕಲು ಗಿಡ ಮರಗಳ ಬೇರು ತವಕಿಸುತಿವೆ
ಮುಳುಗಿದ ಸೂರುಗಳು ತೇಲುವ ಹೆಣಗಳು
ದುಃಖ ಧುಮ್ಮಿಕ್ಕುತ್ತಿದೆ.
ಇದೇನು ಪ್ರಕೃತಿಯ ವಿಕೋಪವೊ..
ನಿರಾಕಾರಿ ಮುನಿಸೊ ?
ಹುಲು ಮಾನವ ರಾದ
ನಮಗೆ ಅರಿವಾ ಗುವುದಿಲ್ಲ ಕ್ಷಮಿಸಿಬಿಡು ತಂದೆ….
ಕರ ಮುಗಿದು ಕೇಳುವೆವು.. ಮುಳುಗಿಸದಿರು.. ಬದುಕು
ಇಮಾಮ್ ಮದ್ಗಾರ