ಊಟ ಬಲ್ಲವನಿಗೆ ರೋಗವಿಲ್ಲ-ಪ್ರೊ.ಸಿದ್ದು ಸಾವಳಸಂಗ

ಲೇಖನ ಸಂಗಾತಿ

ಪ್ರೊ.ಸಿದ್ದು ಸಾವಳಸಂಗ

ಊಟ ಬಲ್ಲವನಿಗೆ ರೋಗವಿಲ್ಲ

ಒಂದು ಹೊತ್ತು ಉಂಡವ ಯೋಗಿ
ಎರಡು ಹೊತ್ತು ಉಂಡವ ಭೋಗಿ
ಮೂರು ಹೊತ್ತು ಉಂಡವ ರೋಗಿ
ನಾಲ್ಕು ಹೊತ್ತು ಉಂಡವನ ಹೊತ್ತುಕೊಂಡು ಹೋಗಿ !!

ಒಂದು ಹೊತ್ತು ಉಂಡವ ಅವನು ಯೋಗಿ.ಎರಡು ಹೊತ್ತು ಉಂಡವ ಸಂಸಾರಿ.ಮೂರು ಹೊತ್ತು ಉಂಡವ ರೋಗಿ.
ನಾಲ್ಕು ಹೊತ್ತು ಉಂಡವನಿಗೆ ರೋಗಗಳು ಆವರಿಸಿ ಬೇಗನೇ ಸಾಯುತ್ತಾನೆ.ಇದು ಹಿರಿಯರು ಊಟದ ಮಹತ್ವದ ಕುರಿತು ಹೇಳಿದ ಮಾತು.ನಾವು ಬದುಕುವುದಕ್ಕಾಗಿ ತಿನ್ನಬೇಕು.
ತಿನ್ನುವುದಕ್ಕಾಗಿ ಬದುಕಬಾರದು.
ಭೋಜನವನ್ನು ನಾವು ಪ್ರಸಾದದಂತೆ ಸ್ವೀಕರಿಸಬೇಕು.
ಯದ್ವಾತದ್ವಾ ತಿಂದು ಆರೋಗ್ಯವನ್ನು ಹಾಳು ಮಾಡಿಕೊಳ್ಳಬಾರದು.
ಬೆಳಗಿನ ತಿಂಡಿ ಹತ್ತು ಗಂಟೆಯೊಳಗಾಗಿ
ಮಾಡಬೇಕು.ಅಂದಾಗ ಕೆಲಸ ಮಾಡಲು ಹುರುಪು ಹಾಗೂ ಚೈತನ್ಯ ಬರುತ್ತದೆ.ಮಧ್ಯಾಹ್ನ ಎರಡು ಗಂಟೆಯೊಳಗಾಗಿ ಊಟ ಮಾಡಬೇಕು.ರಾತ್ರಿಯ ಭೊಜನ ಎಂಟು ಗಂಟೆಯೊಳಗೆ ಮುಗಿಯಬೇಕು.ತಿಂದ ಅನ್ನ ಪಚನವಾಗಲು ಮಲಗುವ ಎರಡು ಗಂಟೆ ಮೊದಲು ಊಟ ಮಾಡಿರಬೇಕು.

ನಲವತ್ತು ವಯಸ್ಸು ಆದವರು ದಿನಕ್ಕೆ ಎರಡು ಹೊತ್ತು ಮಾತ್ರ ಊಟ ಮಾಡಬೇಕು.ಟೇಬಲ್ ಬಳಸಿ ಊಟ ಮಾಡಬಾರದು.
ನೆಲದ ಮೇಲೆ ಚಾಪೆ ಹಾಸಿಕೊಂಡು ಊಟ ಮಾಡಬೇಕು.ಅಂದಾಗ ಭೂಮಿಯೊಂದಗಿನ ಸಂಬಂಧದಿಂದ ಊಟದ ಆನಂದ ಅನುಭವಿಸಬಹುದು.
ಚಮಚದಲ್ಲಿ ತಿಂದರೆ ಊಟ ರುಚಿಸುವುದಿಲ್ಲ.ಕೈಯಿಂದ ಬೆರಳು ಬಳಸಿ ತಿನ್ನಬೇಕು.
ಭೋಜನದ ಸಮಯದಲ್ಲಿ ಟಿ.ವ್ಹಿ ಹಾಗೂ ಮೊಬೈಲ್ ನೋಡಬಾರದು.ಏಕೆಂದರೆ ನಾವು ಎಷ್ಟು ತಿಂದೆವು ಎನ್ನುವುದು ಅನುಭವಕ್ಕೆ ಬರುವುದಿಲ್ಲ.
ಊಟದ ರುಚಿಯೂ
ಗೊತ್ತಾಗುವುದಿಲ್ಲ.
ಮನೆಯವರಲ್ಲಿ ಊಟದ ಮಧ್ಯ ಬೇಧಭಾವ ಮಾಡಬಾರದು.ನೀವು ಊಟಕ್ಕೆ ಕುಳಿತಾಗ ಬೇರೆ ಹೊರಗಿನವರು ಯಾರಾದರು ಬಂದರೆ ಅವರಿಗೂ ಊಟ ಬಡಿಸಬೇಕು.
ಅವರನ್ನು ಬಿಟ್ಟು ತಿನ್ನುವುದು ಮಾನವೀಯತೆಯಲ್ಲ.

ಸಾಯಂಕಾಲ ಸಮಯದಲ್ಲಿ ಊಟ ಮಾಡಬಾರದು.ಹೊಟ್ಟೆ ಬಿರಿಯುವಂತೆ ತಿನ್ನಬಾರದು.
ತಿಂದ ಮೇಲೆ ನೂರು ಹೆಜ್ಜೆ ನಡೆಯಬೇಕು.ರಾತ್ರಿ ಊಟ ಮಾಡಿದ ತಕ್ಷಣ ಮಲಗಬಾರದು.ಪಚನಕ್ರಿಯೆಗೆ ತೊಂದರೆಯಾಗುವುದು.ಊಟಕ್ಕಿಂತ ಮೊದಲು ಅರ್ಧ ಗಂಟೆ ಹಾಗೂ ಊಟ ಮಾಡಿದ ಮೇಲೆ ಅರ್ಧ ಗಂಟೆಯ
ನಂತರ ಸಾಕಷ್ಟು ನೀರು ಕುಡಿಯಬೇಕು.ಭೋಜನದ ಮಧ್ಯ ಮಧ್ಯ ಬಹಳ ನೀರು ಕುಡಿಯಬಾರದು.ಬಸ್ಸಿನಲ್ಲಿ,ಸ್ಮಶಾನದಲ್ಲಿ ಹಾಗೂ
ರಾತ್ರಿ ಹನ್ನೆರಡು ಗಂಟೆಯ ಸಮಯದಲ್ಲಿ ಎಂದಿಗೂ ಊಟ ಮಾಡಬಾರದು.ಊಟದ ಪೂರ್ವದಲ್ಲಿ ಮನದಲ್ಲಿ ದೇವರನ್ನು ನೆನೆಯಬೇಕು.
ಕರಿದ ಪದಾರ್ಥ,ಖಾರ ಹಾಗೂ ಮಾಂಸಾಹಾರವನ್ನು ಹೆಚ್ಚು ಸೇ ವಿಸಬಾರದು.ಊಟದಲ್ಲಿ ಹಣ್ಣು,ಹಸಿ ತರಕಾರಿಗಳನ್ನು ಹೆಚ್ಚಿಗೆ ಬಳಸಬೇಕು.ಹೀಗೆ ಊಟದ ಬಗ್ಗೆ ಸರಿಯಾಗಿ ತಿಳಿದುಕೊಂಡು ಊಟ ಮಾಡಿದರೆ ಊಟ ಬಲ್ಲವನಿಗೆ ರೋಗವಿಲ್ಲ ಎಂಬ ಗಾದೆ ಮಾತು ಅರ್ಥಪೂರ್ಣವೆನಿಸುತ್ತದೆ.


ಪ್ರೊ.ಸಿದ್ದು ಸಾವಳಸಂಗ

One thought on “ಊಟ ಬಲ್ಲವನಿಗೆ ರೋಗವಿಲ್ಲ-ಪ್ರೊ.ಸಿದ್ದು ಸಾವಳಸಂಗ

Leave a Reply

Back To Top