ಡಾ ಶಶಿಕಾಂತ ಪಟ್ಟಣ ರಾಮದುರ್ಗ ಕವಿತೆ-ಉರಿಯುತ್ತಿದೆ

ಕಾವ್ಯ ಸಂಗಾತಿ

ಉರಿಯುತ್ತಿದೆ

ಡಾ ಶಶಿಕಾಂತ ಪಟ್ಟಣ ರಾಮದುರ್ಗ

ಸತ್ಯ ಸಮತೆ ಶಾಂತಿ ಪ್ರೀತಿ
ಹೊತ್ತಿ ಉರಿಯುತಿದೆ ಮಣಿಪುರ
ದ್ವೇಷ ಮತ್ಸರ ಸರಣಿ ಕೊಲೆ
ಹಾಳಾಯಿತು ಶಿವಪುರ

ಎಷ್ಟೋ ಮನೆ ಸುಟ್ಟು ಕರಕಲು
ರಕ್ತ ಹರಿಯಿತು ಬೀದಿ ಬೀದಿ
ಸತ್ತ ಜನರಿಗೆ ಲೆಕ್ಕವಿಲ್ಲ
ರಾಷ್ಟ್ರ ನಾಯಕ ಮೌನ ಮುರಿಯಲಿಲ್ಲ

ಮುದುಕ ಯುವಕ ಮಕ್ಕಳೆಲ್ಲರೂ
ನೆಲದ ಕೆಳಗೆ ಮಲಗಿಬಿಟ್ಟರು
ಕ್ರೂರ ಮುಖದ ರಕ್ಕಸರ
ಮಾಂಸದ ಹಸಿವು ಹಿಂಗಲಿಲ್ಲಾ

ಭಯ ಭೀತಿ ಬಿಕ್ಕಿ ಬಳಲಿ
ಹಸಿದ ಹೊಟ್ಟೆ ಸಾವು ನೋವು
ಆಟವಾಡುವ ಮುದ್ದು ಕಂದ
ಯಾವ ಪಾಪ ಮಾಡಲಿಲ್ಲ

ಹಿಂಸೆ ನಡೆದಿದೆ ಸುಲಿಗೆ ನಿತ್ಯ
ನಿಲ್ಲಲೊಲ್ಲದು ಜನರ ಹತ್ಯೆ
ವರದಿ ಮಾಡದ ಮಾಧ್ಯಮ
ಸಿಗದು ಇಲ್ಲಿ ಯಾವ ಭತ್ಯೆ

ಕಳೆದು ಹೋದವು ಏಳು ದಶಕ
ಬಾಪು ಬೋಸ್ ಕೊಟ್ಟ ಸ್ವಾತಂತ್ರ
ದುಷ್ಟ ಜನರ ನಂಬಿ ನಮ್ಮ
ಬಾಳ ಬಟ್ಟೆ ಅತಂತ್ರ


ಡಾ ಶಶಿಕಾಂತ ಪಟ್ಟಣ ರಾಮದುರ್ಗ

8 thoughts on “ಡಾ ಶಶಿಕಾಂತ ಪಟ್ಟಣ ರಾಮದುರ್ಗ ಕವಿತೆ-ಉರಿಯುತ್ತಿದೆ

  1. ವಾಸ್ತವ ಸ್ಥಿತಿ ಎದ್ದು ಕಣ್ಣು ಮುಂದೆ ಕಟ್ಟಿದ ಹಾಗಿದೆ

  2. ಮಣಿಪುರ ಹೊತ್ತಿ ಉರಿಯುತ್ತಿರುವ ಘಟನೆ ಕಣ್ಣ ಮುಂದೆ ಕಟ್ಟಿಟ್ಟ ಅಪರೂಪದ ನೋವಿನ ಕವನ

Leave a Reply

Back To Top