ಕಂಚುಗಾರನಹಳ್ಳಿ ಸತೀಶ್ ಕವಿತೆ-ಬಂಗಾರದ ಹನಿಗಳು

ಕಾವ್ಯ ಸಂಗಾತಿ

ಬಂಗಾರದ ಹನಿಗಳು

ಕಂಚುಗಾರನಹಳ್ಳಿ ಸತೀಶ್

ರಾತ್ರಿ ಆಕಾಶದಲ್ಲಿ ಹೊಳೆಯುವ
ನಕ್ಷತ್ರಗಳಂತೆ ಶಾಲಾ ಮಕ್ಕಳು
ಆಟ ಪಾಠ ಕೂಟದ ಜೊತೆಗೆ ಕಾಟ ಕೊಟ್ಟು
ಪ್ರೀತಿಯಿಂದ ಗೌರವಿಸುವ ದೇವರು

ಶಾಲಾ ದೇಗುಲದಲ್ಲಿ ಬೋಧಿಸುವ ಗುರುಗಳೇ ಪೂಜಾರಿಗಳು ಕಲಿಯುವ ಮಕ್ಕಳೇ ದೇವರುಗಳು
ಅಸಂಖ್ಯಾ ಆಕಾಶಕಾಯಗಳಂತೆ
ಎಣಿಸಲಾಗದಷ್ಟು ಮಕ್ಕಳ ಪಡೆದ ನಾವೇ ಧನ್ಯ

ಬಂದಾಗ ಶಿರಭಾಗಿ ನಮಿಸಿ ಹೋಗುವಾಗ
ಕೈಬಿಸಿ ಬೀಳ್ಕೊಡುವ ಹೂವುಗಳು
ಹಾದಿ ಬೀದಿಯಲ್ಲಿ ಸಿಕ್ಕಾಗ ವಂದಿಸಿ
ಅಭಿಮಾನ ತೋರಿ ಹಳೆಯ ನೆನಪು ಮಾಡುವರು

ಶಿಕ್ಷಣ ಪಡೆದ ಚಿಣ್ಣರು ದೇಶದ ಶಕ್ತಿ
ಒಬ್ಬರು ಒಂದೊಂದು ಕ್ಷೇತ್ರದಲ್ಲಿ ಸೈ
ಎನಿಸಿಕೊಂಡು ಗುರುಗಳ ಗೌರವ ಹೆಚ್ಚಿಸುವ
ನೀವಲ್ಲವೇ ನಮ್ಮ ಬಂಗಾರದ ಹನಿಗಳು

————————-


ಕಂಚುಗಾರನಹಳ್ಳಿ ಸತೀಶ್

Leave a Reply

Back To Top