ಕಾವ್ಯ ಸಂಗಾತಿ
ಡಾ. ಪುಷ್ಪಾ ಶಲವಡಿಮಠ
ಮಳೆ ಹನಿಗಳು
ಜಡಿಮಳೆ
ಸುರಿದಂತೆ
ನಿನ್ನ ನೆನಪುಗಳು
ಹಸಿರೊಡೆದು
ಮರ ಬಿರಿದಂತೆ
ನಿನ್ನ ಒಲವು
ಹೆಜ್ಜೆ ಇಟ್ಟಲ್ಲಿ
ಮುಟ್ಟಿಡುವ
ಹೂವಂತೆ
ನಿನ್ನ
ಮೆತ್ತನೆಯ
ಅಪ್ಪುಗೆಯು
ನನ್ನ
ಕದಪುಗಳ
ಕೆಂಪಿಗೆ ಕಾರಣವು
ಅದೇನೋ ಗೊತ್ತಿಲ್ಲ ನನಗೆ
ಈ
ಮಳೆಗೂ
ಈ
ಹಸಿರಿಗೂ
ನಿನ್ನ
ಒಲವಿನದೇ
ನಂಟು
ಸದಾ ಜಿನುಗುವ
ನಿನ್ನ ನೆನಪು
ಎದೆಯ
ತೋಟದ ತುಂಬಾ
ನಿನ್ನ
ಪ್ರೀತಿಯ ಹಸಿರು………
ಡಾ. ಪುಷ್ಪಾ ಶಲವಡಿಮಠ
ಹಸಿರಿಗೆ ಮಳೆ ಎಷ್ಟು ಮುಖ್ಯವೋ ಮನಸ್ಸಿಗೆ ಪ್ರೀತಿ ಎಂಬ ನಿಮ್ಮ ಕವನ ತುಂಬಾ ಸೊಗಸಾಗಿ ಮೂಡಿ ಬಂದಿದೆ ಮೆಡಮ್
ಯಾವಗಲ್ ಸರ್ ನಿಮ್ಮ ಓದಿನ ಪ್ರೀತಿಗೆ ಧನ್ಯವಾದಗಳು.