ಮಹಾಂತೇಶ್.ಬಿ.ನಿಟ್ಟೂರ್ ಕವಿತೆ-ಹಸಿ ಗೋಡೆಯ ಕನಸು

ಕಾವ್ಯ ಸಂಗಾತಿ

ಹಸಿ ಗೋಡೆಯ ಕನಸು

ಮಹಾಂತೇಶ್.ಬಿ.ನಿಟ್ಟೂರ್

ಕಾಲೇಜಿನ ಹಸಿಗೋಡೆಯ ಬಿಸಿ ಕನಸು
ಕಾಮನ ಬಿಲ್ಲಿನ ರಸದೋಕುಳಿಯ ಸೊಗಸು!
ನೆಲೆ ಅರಿಯದ, ನೆಲ ಕಾಣದ ನೋಟ
ಕನ್ನಡಿ ನಾಚುವಷ್ಟು ಬಿಂಬದ ಮೈ ಮಾಟ!

ಆಸೆಗಳು;
ಹೂಗಳ ಮೇಲಾಡುವ ಚಿಟ್ಟೆ
ನಿರೀಕ್ಷೆ;
ಮುಳ್ಳಿನ ಮೇಲೆ ಹಾಸಿದ ಬಟ್ಟೆ!
ಪರೀಕ್ಷೆ;
ನಿಶ್ಚಿತ ಗೆರೆ ಮೇಲೆ ಅನಿಶ್ಚಿತ ಕಟ್ಟೆ!

ಸೋಲಿನ ಸೊಲ್ಲಡಗಿಸಿ
ಒಲವು ಗೆಲುವಾಗಲು;
ಕಾದ ನೆಲಕೆ ಮಳೆಯ ಸಿಂಚನ,
ಸ್ಪರ್ಶದ ಪ್ರತಿ ಕ್ಷಣ ರೋಮಾಂಚನ!

ರತಿ-ಮನ್ಮಥರಿಗೂ ಹೊಟ್ಟೆ ಕಿಚ್ಚು;
ಕೂದಲು ಸೀಳುವ ವಾರೆ ನೋಟಕ್ಕೆ…
ಯೌವನದ ಹೊಳೆಯಲ್ಲಿ
ತೇಲಾಡುವ ಸರಸದಾಟಕ್ಕೆ!

ಬಯಕೆಯ ಬಯಲು ಹಸಿರು ಕಾಣದಿರೆ….
ವಿರಹದ ಉರಿಗೆ
ಅತಿರೇಕದ ಎಣ್ಣೆ ತಾಗಿ
ಮನದ ತುಂಬಾ ನೋವಿನ ಬರೆ!

ಬಿದ್ದ ಮಳೆಯ ಹನಿಗಳೆಲ್ಲಾ
ಆಗಲಾರವು ಸ್ವಾತಿ ಮುತ್ತು!


5 thoughts on “ಮಹಾಂತೇಶ್.ಬಿ.ನಿಟ್ಟೂರ್ ಕವಿತೆ-ಹಸಿ ಗೋಡೆಯ ಕನಸು

  1. ನೀವು ಬರೆದ ಕವಿತೆ ಬಹಳ ಚನ್ನಾಗಿ ಇದೆ
    ನಮ್ಮ ಕವಿ ಮಹಾಶಯರೇ ಇನ್ನೂ ಹೆಚ್ಚಿನ ಕವಿತೆ ರಚಿಸಿ ಮಹನೀಯರೇ

  2. Dear Maantesh Nittur,what a wonderful Kavana,” Hasi Godiya Kanasu “.
    It reminds ,and take us back to College days.
    Hearty Congratulations.

    1. Dear Mahantesh Nittur,what a wonderful Kavana “Hasi GodiaKanasu”.
      It reminds and take us to our college days.
      “Hearty Congratulations “

Leave a Reply

Back To Top