ಕಾವ್ಯ ಸಂಗಾತಿ
ಕಣ್ಣೀರೆಂಬ ಜೀವಜಲ
ಟಿ.ದಾದಾಪೀರ್, ತರೀಕೆರೆ
ಸಾಗರದಂತಹ
ಕಣ್ಣುಗಳಲ್ಲಿ ಬರಿ ನೀರಿದೆ
ಅಂದು ಕೊಂಡಿದ್ದೆ
ಹನಿ ಹೊಡೆದು
ಹೊರ ಬಂದಾಗ
ಫಳ ಫಳನೆ ಮಿಂಚಿದ್ದು
ಮಾತ್ರ
ಬೆಲೆ ಕಟ್ಟಲಾಗದ
‘ಮುತ್ತು,ರತ್ನ,ಹವಳಗಳೇ’
ನೀನಳುವೆ ಎಂಬುದು
ಮೊದಲೆ ಗೊತ್ತಿದ್ದರೆ
ಬೊಗಸೆಯಲ್ಲಿ
ಹಿಡಿದಿಟ್ಟು ಕೊಳ್ಳುತ್ತಿದ್ದೆ
ಕಣ್ಣೀರ ಹನಿಗಳ…
ಬೇಕಾಗುತ್ತಿತ್ತು
ದೇಶ, ಭಾಷೆ, ಗಡಿಯ
ಬೆಂಕಿಯ ನಂದಿಸಲು
ನಾಳೆಗಳ ನೆಮ್ಮದಿಗಾಗಿ
ನೀನು
ತುಟಿ ಕಚ್ಚಿ ಹಿಡಿದಿಟ್ಟರು
ಹಿಡಿದಿಡಲಾಗದ
ಕಣ್ಣೀರ ಹನಿಗಳೆಲ್ಲ .
ಸದ್ದು ಮಾಡುತ್ತಿವೆ ನನ್ನೆದೆಯಲ್ಲಿ
ಸಿಡಿಲಬ್ಬರದ ಮುಂಗಾರು
ನೀರಸ ಅನಿಸುತಿದೆ
ಹೇಳದೆ ತೊಟ್ಟಿಕ್ಕಿದ
ನಿನ್ನ ಕಣ್ಣಿರ ನಾಲ್ಕು ಹನಿಗಳ
ಜೀವಜಲದ ಮುಂದೆ
ಸುಂದರವಾದ ಭಾವಾಭಿವ್ಯಕ್ತಿ
ಧನ್ಯವಾದಗಳು ಮೇಡಂ