ತಾತಪ್ಪ.ಕೆ. ಕವಿತೆ-ಪ್ರೇಮಚಂದ್ರ(ದ್ರಿ)ಮ(ಮೆ)

ಕಾವ್ಯ ಸಂಗಾತಿ

ಪ್ರೇಮಚಂದ್ರ(ದ್ರಿ)ಮ(ಮೆ)

ತಾತಪ್ಪ ಕೆ.

ಪ್ರೇಮದೂರಿಗೆ ಪ್ರೀತಿ
ತರಲೊದ ಸಖನಿಗೆ
ಸಂತೆಯಲ್ಲಿ ಸಿಕ್ಕಿದ್ದು
ಬಿಕರಿಯಾದ ಆರಿದ ಪ್ರೀತಿ
ದ್ವೇಷ,ಅಸಹನೆ, ಭಾವದ ಅಭಾವ,.

ಇತ್ತ
ಕಾದ ಕುಳಿತ ಸಖಿಯೂ
ಸುಖಿಯಾಗಲ್ಲಿಲ್ಲ
ಸಖನಿಲ್ಲದೆ.

ಆದರೂ
ಚಿಗುರುವ ಪ್ರೀತಿಗೆ
ಅರಳುವ ರೀತಿಗೆ
ಹೇಳುವ ನೀತಿಗೆ
ತಡೆಯಿಲ್ಲದೆಲ್ಲೆಗೆ
ಕಾಯ್ದಿರುವಳು
ಮನದ ಮಾಯೆಯೊಳು
ಕಾಯವಾಗಿ ಚಂದ್ರಮೆಯಾಗಿ ,
ಪ್ರೇಮಮಲ್ಲಿಗೆಗಾಗಿ..

ಸಖಿಗೇನು ಗೊತ್ತು
ಲೋಕದ ವ್ಯಾಪಾರ.
ಪ್ರೇಮದೂರಿನಲಿ
ಪ್ರೀತಿ ಯಾರ ಪರ?
ಭೂರಮೆಯಲ್ಲಿರುವುದೆಲ್ಲಾ
ಇಹ-ಪರ-ಅಜೀವಪರ
ಅಪರಂಪರ
ನಿಲುಕುವ ಪ್ರೀತಿಗೆ
ನಿಲುಕದ ಭೀತಿ
ಇದರ ವಾಸ್ತವ್ಯವೇ
ಪ್ರೇಮ ಫಜೀತಿ..
ಲೋಕದ್ದು ಯಾವ ನೀತಿ?
ಅದಕ್ಕಿರುವುದೊಂದೇ ಭ್ರಾಂತಿ
ತೇಲಿಸಿ ಮುಳುಗಿಸುವ,
ಮುಳುಗಿಸಿ ತೇಲಿಸುವ
ಅಸಹನೀಯ ಅನೀತಿ..

ಪ್ರೇಮದೂರಿನ ಚಂದ್ರಮ
ಪ್ರೀತಿಯೂರಿನ ಚಂದ್ರಿಮೆ
ಅಲೆದಾಡಿದ್ದು ಮರೀಚಿಕೆಯ
ಮಾಯೆಯೊಳಗೆ
ಕನಸಿನ ಲೋಕದೊಳಗೆ
ಕಲ್ಪನೆಯ ನಿಗೂಢತೆಯೊಳಗೆ.
ಕೂಡಲಿಲ್ಲ,ಝೇಂಕರಿಸಲ್ಲಿಲ್ಲ
ಮಧುವಾಗಿ,ಹೂವಾಗಿ
ಅಲೆಯಾಗಿ ,ಕಡಲಾಗಿ
ಇಂಪಾದ ಇಂಚರವಾಗಿ
ಶಬ್ದದ ಪದದ ಧ್ವನಿಯಾಗಿ
ಹನಿಯಾಗಿ ಹಿತವಾಗಿ
ಮಿತವಾಗಿ,ಸುಕೃತವಾಗಿ..
ಪ್ರೀತಿ ಅಮರವಾಯ್ತು
ಪ್ರೇಮ ಅಜರಾಮರವಾಯ್ತು
ಚಂದ್ರಮ ಚಂದ್ರಿಮೆಗೆ
ಅಗೋಚರವಾಯ್ತು


14 thoughts on “ತಾತಪ್ಪ.ಕೆ. ಕವಿತೆ-ಪ್ರೇಮಚಂದ್ರ(ದ್ರಿ)ಮ(ಮೆ)

  1. ಅದ್ಬುತ ರಚನಾತ್ಮಕ ಕವಿತೆ. ಸೃಜನಶೀಲ ಕವಿಗಳಿಗೆ ಅಭಿನಂದನೆಗಳು

Leave a Reply

Back To Top