ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಅಬ್ಳಿ,ಹೆಗಡೆ.

ಒಳಹೊರಗೆ

ಹೊರಗೆ ತಂಪು
ಹಸಿರು,
ಒಳಗೆ ಬಿಸಿ
ಬಸಿರು,
ಹೊರಗೆ ಮೆರೆವ
ಹೆಸರು
ಒಳಗೆ ಮೊರೆವ
ಕೊಸರು.

            ಮುಖದಲ್ಲಿ
            ಖುಷಿ ನಗೆ,
            'ಬಗೆ'ಯಲ್ಲಿ
            ಕೆಂಡ,ಧಗೆ,
            ಹೊರಗೆ ಮಧುರ
            ಕೊರಳು,
            ಒಳಗೆ ಬರೀ-
            ನರಳು,
            ಹೊರಗೆ ಬಣ್ಣ-
             ಹೂ..ಹಣ್ಣು,
            ಒಳಗೆ ಕತ್ತಲು
            ಕುರುಡು ಕಣ್ಣು.

            ಹೊರಗೆ 
            ಮಾತು ಮುತ್ತು,
            ಒಳಗೆ 
            ಮೌನ ಕುತ್ತು,
            ನಡುವೆ ಸತ್ತು
            ಬದುಕುವ
            ಈ...ಹೊತ್ತು
            ಮಾತ್ರ..ನನ್ನದ್ದು.

--------------------

About The Author

1 thought on “ಒಳಹೊರಗೆ ಕವಿತೆ-ಅಬ್ಳಿ,ಹೆಗಡೆ.”

  1. ಮಹಾಬಲಮೂರ್ತಿ ಕೊಡ್ಲೆಕೆರೆ

    ಕವಿತೆಗೆ ಒದಗಿಸಿದ ಚಲನಶೀಲತೆ ಅಭಿನಂದನೀಯ.

Leave a Reply

You cannot copy content of this page

Scroll to Top