ಕಾವ್ಯ ಸಂಗಾತಿ
ಬಾಳ ಹೋಳಿಗೆಯಲ್ಲಿ..
ಡಾ ವಿಜಯಲಕ್ಷ್ಮಿ ಪುಟ್ಟಿ
ಬೆಳಕು ನೆರಳುಗಳ ಚಿತ್ರಣದ ಲೋಕ
ಬಣ್ಣ ಬಣ್ಣ ನಿರ್ವಣ್ಣಗಳ ಮಿಶ್ರಣ,
ಬಾಳ ಹೋಳಿಗೆಯಲ್ಲಿ ತುಂಬಿಹುದು
ಸುಖ ದುಃಖಗಳ ಹೂರಣ,
ಸ್ಥಾವರ ಜಂಗಮದ ಮಿಲನದಿ
ಸಾಗುತ್ತಿದೆ ಈ ಬದುಕು,
ಜಡ ಚೇತನದ ಮಾಯೆಯಂತೆ
ತೇಲುವಂತೆ ಜೀವದ ನೆಲೆ
ಸಾವಧಾನದಿ ಬದುಕ ನದಿಯಲಿ,
ಮೂಡುವಂತೆ
ಹೊನ್ನ ಹೆಜ್ಜೆ ಗುರುತು
ಬಾಳ ಪಥದಲ್ಲಿ,
ಇದೀಗ ನಿನ್ನೊಂದಿಗೆ
ಅನಂತ ವರ್ಷಗಳ ಸಾರ್ಥಕ್ಯ ಬದುಕು ಬಾಳ ಹೋಳಿಗೆಯಲ್ಲಿ..
ಬೆಳಕು ನೆರಳುಗಳ ಚಿತ್ರಣದ ಲೋಕ
ಬಣ್ಣ ಬಣ್ಣ ನಿರ್ವಣ್ಣಗಳ ಮಿಶ್ರಣ,
ಬಾಳ ಹೋಳಿಗೆಯಲ್ಲಿ ತುಂಬಿಹುದು
ಸುಖ ದುಃಖಗಳ ಹೂರಣ,
ಸ್ಥಾವರ ಜಂಗಮದ ಮಿಲನದಿ
ಸಾಗುತ್ತಿದೆ ಈ ಬದುಕು,
ಜಡ ಚೇತನದ ಮಾಯೆಯಂತೆ
ತೇಲುವಂತೆ ಜೀವದ ನೆಲೆ,
ಸಾವಧಾನದಿ ಬದುಕ ನದಿಯಲಿ
ಮೂಡುವಂತೆ,
ಹೊನ್ನ ಹೆಜ್ಜೆ ಗುರುತು
ಬಾಳ ಪಥದಲ್ಲಿ,
ಇದೀಗ ನಿನ್ನೊಂದಿಗೆ ಅನಂತ ವರ್ಷಗಳ ಸಾರ್ಥಕ್ಯ ಬದುಕು ನಮ್ಮೀ ಸಂಸಾರ ರಥದಲ್ಲಿ.