ಇಂದಿರಾ ಮೋಟೆಬೆನ್ನೂರ ಕವಿತೆ-ಒಲವ ಮುನ್ನುಡಿ

ಕಾವ್ಯಸಂಗಾತಿ

ಒಲವ ಮುನ್ನುಡಿ

ಇಂದಿರಾ ಮೋಟೆಬೆನ್ನೂರ

ಮಾತು ನುಡಿಯದ
ನೂರು ಭಾವ ನಮ್ಮ
ಮೌನ ರಾಗವು..

ಅಳಿಸಲಾಗದ ಮಧುರ
ಜೀವ ಭಾವ ಬೆರೆತ
ನಮ್ಮ ಸ್ನೇಹ ಯಾನವು…

ಮುನ್ನುಡಿ ಇರದ
ಒಲವ ಕನ್ನಡಿ
ಪ್ರೀತಿ ಪಯಣ ಗಾನವು….

ದೂರ ಪಯಣದ
ನೇರ ದಾರಿಯಿದು..
ಕವಲೊಡೆಯದ ತಾಣವು…

ನಕ್ಕ ಘಳಿಗೆಯು ಅಮರ
ಮರೆಯಲಾಗದ ಪ್ರೀತಿ
ತೊರೆಯಲಾಗದ ಬಂಧವು…


One thought on “ಇಂದಿರಾ ಮೋಟೆಬೆನ್ನೂರ ಕವಿತೆ-ಒಲವ ಮುನ್ನುಡಿ

Leave a Reply

Back To Top