ಕಾವ್ಯ ಸಂಗಾತಿ
ಹೀಗೊಂದಿಷ್ಟು ಎದೆ ಬೀದಿಯ ಸಾಲುಗಳು….
ಅಭಿಷೇಕ ಬಳೆ ಮಸರಕಲ್
ನನ್ನ ಇರುವಿಕೆಗೆ
ಕಾರಣ
ನಿನ್ನ ಉಸಿರಾಟ
ನಿನ್ನ
ಹೆಜ್ಜೆ ಗುರುತಗಳ ಹಾದಿಯಲ್ಲಿ
ಕನಸುಗಳ ಬಿತ್ತಿದ್ದೇನೆ
ಈಗೀಗ
ನಿನ್ನೊಲವು
ದುಬಾರಿಯಾಗಿದೆ
ಪದಗಳಿಗೂ
ನಿನ್ನ ಮೇಲೆ ಮೋಹ
ಕವಿತೆಯಾಗಿವೆ
ಗುಂಡಿಗೂ ಗುಂಡಿಗೆಯೊಡ್ಡುವ ಗಂಡಿಗೆ ನಿನ್ನಿದೆರೂ ಮಂಡಿಯೂರಿ ಗುಲಾಬಿ ಕೊಡುವ ಧೈರ್ಯವಿರಲಿಲ್ಲ
ಪ್ರೀತಿಯಿಂದಾದ ನೋವಲ್ಲಿ ಮುಳುಗೆದ್ದ ಹೃದಯದ ಕಂಬನಿಗೆ ಕೊನೆಯೇ ಇಲ್ಲವೇನೆ
ನನ್ನ
ಕಂಬನಿಯೇ ಶಾಯಿ
ಬರೆದು ಬಿಡಿ
ಗೋರಿಯ ಮೇಲೆ
ಪ್ರೀತಿಗಾಗಿ
ಬೊಗಸೆ ಒಲವಿಗಾಗಿ
ಸತ್ತವನೆಂದು
ನಿನ್ನ ಹೆಜ್ಜೆ ಗುರುತುಗಳ
ಹಾದಿಯಲ್ಲಿ ಕನಸುಗಳ
ಬಿತ್ತಿದ್ದೇನೆ
ಕೊನೆಯ ಪತ್ರ
ಪೂರ್ತಿಯಾಗಿದೆ
ಇಂತಿ ನಿನ್ನ ಪ್ರೀತಿಯ….
ನೀನೆ ತುಂಬಿ ಓದಿಕೋ
ನಮ್ಮಿಬ್ಬರ ಕೊನೆಯ
ಭೇಟಿಗೆ ನಿಗದಿಯಾದ ದಿನ
ನನ್ನ ಹೃದಯದ ಸಾವಿನದ್ದು
ಅವಳಿರುವ ಊರಿನಲ್ಲಿ
ನನ್ನ ಹೂತು ಬಿಡಿ
ಪ್ರೀತಿಯನ್ನ ಹೇಳ ಬೇಕಿದೆ
ನಿನಗೆ
ಕೊಡದ ಗೆಜ್ಜೆ
ಬರೆದ ಪತ್ರ
ನನ್ನ ಹೃದಯ
ಅಸುನೀಗಿ ಬಹಳ ಕಾಲವಾಗಿದೆ
ನೀನು
ನೋವು ನೀಡಿ ಹೋದೆ
ಕವಿತೆ
ಉಸಿರು ಕೊಟ್ಟು ಜೊತೆಯಾಯಿತು
ಬೊಗಸೆ ಒಲವಿಗಾಗಿ ಸತ್ತವನೆಂದು …
ಚಂದದ ಸಾಲು
ಆಹಾ ,ಅದ್ಭುತ
ಪದ ಗ ಳಿ ೂ ನಿ ನ್ನ ೇ ೋ ಹ.. ಕವಿ ತೆ ಯಾಿವೆ
ಬಹಳ ಸುಂದರ…
ಮನಮುಟ್ಟುವ ಕವಿತೆ