ಸುವಿಧಾ ಹಡಿನಬಾಳ ಕವಿತೆ- ನಿದ್ದೆ

ಕಾವ್ಯ ಸಂಗಾತಿ

ನಿದ್ದೆ

ಸುವಿಧಾ ಹಡಿನಬಾಳ

ಕಳ್ಳ ನಿದ್ದೆ ಗಾಢ ನಿದ್ದೆ
ಕರೆದರೂ ಬಾರದ
ಕಿಲಾಡಿ ನಿದ್ದೆ

ಮಾಸ್ತರರಿಗೆ ಪೇಪರ್ ನೋಡುವಾಗ
ಬರುವ ಸೋಮ್ಬೇರಿ ನಿದ್ದೆ

ತಂಗಾಳಿಯಂತೆ ಸುಳಿದು
ಹಾಯೆನಿಸುವ ಚಿನಕುರಳಿ ನಿದ್ದೆ

ಅಪಾನವಾಯುವಿನಂತೆ
ಅರಿವಿಲ್ಲದೇ ಬಂದು
ಹುಳ್ಳಗಾಗಿಸುವ ಮಳ್ಳ ನಿದ್ದೆ

ಸಖನ ಎದೆಯಲ್ಲಿ
ಮುಖವಿರಿಸಿ ಮುಲುಕಾಡಿದರೂ
ಬಾರದ ವಯ್ಯಾರಿ ನಿದ್ದೆ

ಜಗದ ಜಂಜಡವನೆಲ್ಲ
ನುಂಗಿ ಹಗುರಾಗಿಸುವ
ಮಡದಿಯಂತ ನಿದ್ದೆ

ನಾಳಿನ ಶುಭೋದಯಕೆ
ಕಣ್ಬಿಡುವ ಹಸಿಗೂಸಿನಂತ
ತಾಜಾ ನಿದ್ದೆ

ಸಂಗಾತಿಯ ತೋಳಲ್ಲಿ
ಕರಗಿ ಹೋಗುವ
ಜೇನಿನಂತ ನಿದ್ದೆ

ಬಾ ಅಪ್ಪಿಕೊ ಆವರಿಸು
ಮೈ ಮನವ ಹಗುರಾಗಗಿಸು
ನೆಚ್ಚಿನ ಬೆಚ್ಚನೆಯ ನಿದ್ದೆ


Leave a Reply

Back To Top