ಕಾವ್ಯ ಸಂಗಾತಿ
ವಾಣಿ ಯಡಹಳ್ಳಿಮಠ
ಗಜಲ್
ಬದುಕು ನೀಡಿದ ಪ್ರತಿ ನೋವನು ದಾಖಲಿಸಲಾಗಲಿಲ್ಲ
ಕೆಳಗಿಳಿದ ಪ್ರತಿ ಕಂಬನಿಯನು ಕಾಗದಕ್ಕಿಳಿಸಲಾಗಲಿಲ್ಲ
ಮೌನಕ್ಕೂ ಕದನಕ್ಕಿಳಿಯಲು ಸಾವಿರ ಕಾರಣಗಳು
ಮಾತು ಮುಗಿದಾಗ ಪದಗಳನು ಪೇರಿಸಲಾಗಲಿಲ್ಲ
ನನ್ನವರೆಂದು ಸಾರಿ ಸಾರಿ ಸೋಲುವ ಸೊಗಡೊಂದಿತ್ತು
ಅಪನಂಬಿಕೆ ಬಸಿರಾದಾಗ ನೇಹವನು ಹೆರಲಾಗಲಿಲ್ಲ
ಸಂತೆಗೂ ಒಮ್ಮೊಮ್ಮೆ ಒಂಟಿತನ ಬೇಕೆನಿಸುತ್ತಿರಬೇಕು
ಸಂಭ್ರಮ ತೀರಿದಾಗ ಸಂತಸವನು ಸವಿಯಲಾಗಲಿಲ್ಲ
ಕಿವಿಗೊಟ್ಟು ಕೇಳು ಕಲ್ಲೆದೆಯ ಕವಿತೆಯನು ‘ವಾಣಿ ‘
ಭಾವ ಅಸುನೀಗಿದಾಗ ಭಾವನೆಯನು ಆಲಾಪಿಸಲಾಗಲಿಲ್ಲ
Very nice
Thank you Ma’am ji