ಕಾವ್ಯ ಸಂಗಾತಿ
ನಾಗರತ್ನ ಹೆಚ್. ಗಂಗಾವತಿ
ಜೇನು ಗೂಡು
.
ರೆಕ್ಕೆ ಬಲಿತ ಹಕ್ಕಿಯೊಂದು
ದ್ವೇಷವೆಂಬ ಜಾಡು ಹಿಡಿದು
ತನ್ನತನವ ಮರೆತು ಬಿಟ್ಟು
ಎಲ್ಲರನ್ನು ದ್ವೇಷಿಸುತ್ತಾ.
ಮುಂದೆ ಸಾಗಿತ್ತಾ ಹಕ್ಕಿ ಮುಂದೆ ಸಾಗಿತ್ತಾ.
ಹಾರುವ ದಾರಿಯಲ್ಲಿ
ತಂದೆ ತಾಯಿಯನ್ನು ಮರೆತು.
ಅಕ್ಕ ತಂಗಿಯರನ್ನು ತೊರೆದು
ಹಾರುತ್ತ ತನ್ನ ತನವ ಮರೆತಿತ್ತ.
ಗಾಳಿ ವೇಗದಲ್ಲಿ ಸಿಲುಕಿ
ನೋವಿನಲೀ ಬೇಯುತ್ತಿರಲು.
ಎಲ್ಲರನ್ನ ನೆನೆದು
ಕಂಬನಿಯ ಹಾಕಿತ್ತ.
ತನ್ನ ತಪ್ಪಾ ಅರಿತುಕೊಂಡು
ಮರಳಿ ಗೂಡಿಗೆ ಸಾಗಿತ್ತಾ.
ಎಲ್ಲರೊಂದಿಗೆ ನಕ್ಕು ನಲಿಯುತ
ಎಲ್ಲರ ಮನದಲ್ಲಿ ಪ್ರೀತಿ ಬೆಳೆಸುತ್ತಾ.
ನಾವೆಲ್ಲಒಂದೇ ಎಂಬ ಭಾವನೆ ತಿಳಿದು
ಸಂತೋಷದಲ್ಲಿ ಜೀವನ ನಡೆಸಿತ್ತಾ.
ನೈಜ ಬದುಕಿಗೆ ಪ್ರಕೃತಿಯನ್ನು ಹೋಲಿಸಿದ್ದು ಉತ್ತಮವಾಗಿದೆ