ಕಾವ್ಯ ಸಂಗಾತಿ
ಮಹಾಂತೇಶ್.ಬಿ.ನಿಟ್ಟೂರು,
ಬೆಳ್ಳಿ ಕಿರಣ


ಕತ್ತಲ ಕಮರಿಯ ಮಿಂಚೊಂದು
ಬೆಳಕಿನ ಸಹವಾಸದಿಂದ
ಬೆಳ್ಳಿ ಕಿರಣದ ಬಳ್ಳಿಯಾಗಿ
ಹಬ್ಬುತ್ತಿಹುದು ಊರ
ಗೋಡೆಯ ಮೇಲೆ…!
ಬಡತನದ ಕಡು ಕಷ್ಟದ
ತಗ್ಗಿನಲ್ಲಿ ಬಗ್ಗಿ ನಡೆಯುವಾಗ
ದಿಬ್ಬದ ಮೇಲೆತ್ತಿ ಹಿಡಿದ ಕೈಗಳಿಗೆ
ಕಾಲುಗಳಾಗಿ, ಕಾವಲಾಗಿ,
ಕಾವ್ಯದ ಸಾಲುಗಳಾಗಿ
ಕವಲಾದ ಬದುಕಿನಾ ಟಿಸಿಲು…..!
ನೆರಳನಿತ್ತ ಕೊರಳಿಗೆ
ಬಂಗಾರದ ಪದಕ,
ಕರುಳ ಬಳ್ಳಿಯ ಉದರಕೆ
ನುಗ್ಗೇ ಸೊಪ್ಪಿನ ಉದಕ !
ದಾರಿ ದೀವಿಗೆಯ ಬತ್ತಿಗೆ
ಸಮಯೋಚಿತ ತೈಲೋದಕ!

Nice lines sir
Super sir