ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಬಾಗೇಪಲ್ಲಿ

ಗಜಲ್

ನನ್ನ ಪ್ರಿಯತಮೆಯ ತುಟಿಯಲಿ ಲಾಸ್ಯವಾಗು ನನ್ನ ಗಜಲೇ
ನನ್ನ ಭಾವದೆಲ್ಲಾ ಅಭಿವ್ಯಕ್ತಿಗಳಿಂದ ಧನ್ಯವಾಗು ನನ್ನ ಗಜಲೇ

ಈ ಲೋಕದಿ ನನ್ನ ಅಸ್ಥಿತ್ವಕೆ ವಿಶೇಷ ಮೆರಗು ಬರಲೆಂಬ ಬಯಕೆ
ಓದುಗರ ಮನ ಗೆದ್ದು ಆವರು ಹೃದಯ ಮಿಡಿತವಾಗು ನನ್ನ ಗಜಲೇ

ಒದೊಲ್ಲೊಂದು ಚಿಂತಾ ಚಿತೆಯಲಿ ಬಳಲುತಿಹರು ಬಹು ಮಂದಿ
ಹಾಡಾಗಿ ಮನ ಗೆದ್ದು ಚಿಂತೆಯ ನೋವ ಔಷದವಾಗು ನನ್ನ ಗಜಲೇ

ನಿನ್ನ ಅಕ್ಷರಗಳೆಲ್ಲಾ ಸ್ವರಗೂಡಿ ಮಧುರಗಾನ ಆಗಲೆಂಬ ಮಹದಾಸೆ
ಸುಶ್ರಾವ್ಯ ಕಂಠ ಗಾಯಕನ ಮೈಗೂಡಿ ಪ್ರಸಿದ್ಧ ಗಾನವಾಗು ನನ್ನ ಗಜಲೇ

ಕೃಷ್ಣಾ! ವೇಣು ಗಾನವ ಕೇಳಿ ಪಶು ಪಕ್ಷಿಗಳು ಮರುಳಾದಂತೆ ದ್ವಾಪರದಿ
ಜಗದ ಪ್ರೇಮಿಗಳೆಲ್ಲರ ಸುಹಾಸದ ” ಪಿಸುಮಾತಾಗು” ನೀ ನನ್ನ ಗಜಲೇ.

—————————————

About The Author

1 thought on “ಬಾಗೇಪಲ್ಲಿ-ಗಜಲ್”

Leave a Reply

You cannot copy content of this page

Scroll to Top