ಕಾವ್ಯ ಸಂಗಾತಿ
ಪ್ರಜ್ವಲಾ ಶೆಣೈ
ಯೋಗ – ಸುಯೋಗ
ಯೋಗವೆನ್ನುವುದು ಬರಿ ವ್ಯಾಯಾಮವಲ್ಲ
ಅದು ದೇಹ ದಣಿಸುವ ಆಯಾಮ
ಕುಸ್ತಿಯೆಂದರೆ ಬರಿ ಕಸರತ್ತಲ್ಲ
ಅದು ತಾಕತ್ತು ಬೆಳೆಸುವ ಸಂಗ್ರಾಮ….
ಓಡುತ ಆಡುತ ನೆಗೆದಾಗೆಲ್ಲ
ಮನಸಿಗೂ ದೊರೆವುದು ಸಂಭ್ರಮ
ಬಾಗುತ ತಿರುಗುತ ನಡೆದಾಗೆಲ್ಲ
ಅದು ಆತ್ಮಕ್ಕೂ ನೀಡುವುದು ಸಂಯಮ…..
ಪ್ರಾಣಾಯಾಮ ಮಾಡುವರೆಲ್ಲ
ಮನಗಾಣುವರು ಇದರ ಪರಿಣಾಮ
ಉಸಿರಿಗೆ ಕಸುವನು ನೀಡುತ ಎಲ್ಲ
ಚಿಂತೆಗೆ ನೀಡುವರು ವಿರಾಮ……
ವಿವಿಧ ಭಂಗಿಗೆ ಪರಿ ಪರಿ ಹೆಸರಿದೆಯಲ್ಲ
ಇದು ಯೋಗಾಸನದ ನಿಯಮ
ಶವಾಸನ ಮಾಡುತ ಮಲಗಿಹೆಯಲ್ಲ
ಇದು ಆಸನದಲ್ಲೇ ಅಂತಿಮ…..
ಯೋಗದಿಂದ ರೋಗದ ಭಯವಿಲ್ಲ
ಧ್ಯಾನದಿಂದ ಸರ್ವರೋಗ ನಿರ್ನಾಮ
ಸುಯೋಗವಿದು ಒದಗಿದೆ ನಮಗೆಲ್ಲ
ದೇಶಕ್ಕೆ ನೀನಾಗು ಉತ್ತಮ ಸರ್ವೋತ್ತಮ…..
——————————-
ಪ್ರಜ್ವಲಾ ಶೆಣೈ
Wonderful!!