ಕಾವ್ಯ ಸಂಗಾತಿ
ಬುದ್ಧಿ ಸ್ವಾಸ್ತ್ರ ಸಮೃದ್ಧಿ
ಡಾ ಅನ್ನಪೂರ್ಣ ಹಿರೇಮಠ
ಬೆಳಿಗ್ಗೆ ಯೋಗ ಧ್ಯಾನ ಇರಲಿ ನಿತ್ಯ
ಮಾಡು ತನುಮನಕೆ ಆನಂದವು ಸತ್ಯ
ಅಳಿಸು ನಿನ್ನಲ್ಲಿರುವ ಎಲ್ಲಾ ಮಿತ್ಯ
ಅರಿತುಕೋ ಆರೋಗ್ಯದ ನಿತ್ಯಸತ್ಯ//
ಇದರಿಂದ ಭಾರತೀಯರ ಸ್ವಾಸ್ಥ್ಯ ಸಮೃದ್ಧಿ
ಹಿಂದಿನ ಹಿರಿಯರೆಲ್ಲರ ಆಯುಷ್ಯ ವೃದ್ಧಿ
ಸುಂದರ ದೇಹದಿ ವೃದ್ಧಿಸುವುದು ಬುದ್ಧಿ
ಹೊಂದು ನೀ ಜೀವನದಿ ಆರೋಗ್ಯ ಸಿದ್ದಿ//
ಋಷಿಮುನಿಗಳ ಸಿದ್ಧಿಗೆ ಇದು ಹಾದಿ
ಹಾಕುವುದು ಆರೋಗ್ಯಕ್ಕೆ ಭದ್ರ ಬುನಾದಿ
ಇದರ ಚರಿತ್ರೆಯಿಹುದು ಬಹಳ ಅನಾದಿ
ಯೋಗದಿಂದ ಸಿಗುವುದು ಆರೋಗ್ಯದ ಗಾದಿ//
ದಿನ ದಿನ ಯೋಗ ಮಾಡಿ ಆಗು ಗಟ್ಟಿ
ಯಾವುದಕ್ಕೂ ಬಗ್ಗದ ಜಗಜಟ್ಟಿ
ಮಾಂಸ ಮೂಳೆಗಳ ಹದದಿ ತಟ್ಟಿ
ಸಾರ್ಥಕವಾಗಲಿ ನೀ ಬಂದದ್ದು ಹುಟ್ಟಿ//
ನಿಯಮಿತ ಹಿತಮಿತ ಆಹಾರ ಸೇವಿಸು
ಹಣ್ಣು ಹಾಲು ಮೊಳಕೆಕಾಳು ನುರಿಸು
ಪೌಷ್ಟಿಕಾಂಶವುಳ್ಳ ಆಹಾರ ಅರ್ಜಿಸು
ರೋಗವದು ಬರದಂತೆ ದೂರವಿರಿಸು//
ಯೋಗದಿಂದ ರೋಗ ಮುಕ್ತಿ
ಧ್ಯಾನದಿಂದ ಧ್ಯಾನದಿಂದ ಸೂಕ್ತ ಯುಕ್ತಿ
ಪ್ರಾಣಾಯಾಮದಿಂದ ಜ್ಞಾನ ಶಕ್ತಿ
ಜೀವಕೆ ದೊರೆಯುವುದು ಮುಕ್ತಿ//
ಡಾ ಅನ್ನಪೂರ್ಣ ಹಿರೇಮಠ
ಸೊಗಸಾಗಿದೆ
ತುಂಬಾ ಅರ್ಥ ಪೂರ್ಣವಾಗಿದೆ ರೀ ಮೇಡಂ