ಕಾವ್ಯ ಸಂಗಾತಿ
ಆಶಾ ಎಸ್ ಯಮಕನಮರಡಿ
ಕೆರೆಯ ನೀರನು ಕೆರೆಗೆ ಚೆಲ್ಲಿ
ಪಡೆದುದನು ಕೊಡುವಲ್ಲಿ
ಒಣ ಜಂಭ ಪಡಬೇಡಾ
ನಿನ್ನದೆನ್ನುತ ನುಡಿಯಬೇಡ
ಕೊಟ್ಟು ಹಂಗಿಸ ಬೇಡಾ
ಈ ಭೂಮಿ , ಗಾಳಿ,ನೀರು
ಎಲ್ಲವು ಆ ದೈವದಾ ಕೊಡುಗೆ
ಉಂಡುಟ್ಟು ಹರುಷ ಪಡಬೇಕು
ಆದರದು ತನ್ನದಲ್ಲಾ ಎಂದು ತಿಳಿದಿರಬೇಕು
ಭೂತಾಯಿ ಮಡಿಲಲ್ಲಿ ದುಡಿದುಣ್ಣು
ಬೇಡಿ ಬಂದವರಿಗೆ ಕೊಟ್ಟು ನೋಡು
ಬದಲಿಗೆ ಕೊಡುವಳು ತಾಯಿ
ಹಿಡಿಗೆ ಪಡಿ ಲೆಕ್ಕದಲಿ ನಿನಗೆ
ತುಂಬಿದಾ ಕೆರೆಯಂತೆ ಸಿರಿಬರಲು
ನನ್ನ ಗಳಿಕೆ ಎಂದು ಮೆರೆಯದಿರು
ಕೂಡಿಟ್ಟು ಹೋಗದೆ ದಾನ ಮಾಡು
ಕೆರೆಯ ನೀರನು ಕೆರೆಗೆ ಚೆಲ್ಲಿ ಹೋಗು
ಆಶಾ ಎಸ್ ಯಮಕನಮರಡಿ
Very meaningful and beautiful