ಇಮಾಮ್ ಮದ್ಗಾರ ಕವಿತೆ-ಸತ್ಯ

ಕಾವ್ಯ ಸಂಗಾತಿ

ಸತ್ಯ

ಇಮಾಮ್ ಮದ್ಗಾರ

ನಾನೊಬ್ಬ ಮುಸ್ಲಿಂ
ಮಸೀದಿಗೆ ಹೋಗಿದ್ದೆ
ನಮಾಜು ಮಾಡಿ
ನನ್ನ ತಪ್ಪುಗಳ ಮಾಫ್
ಮಾಡು ಎಂದು
ದುವಾಃ ಮಾಡಲು

ನಾನೊಬ್ಬ ಹಿಂದು
ಮಂದಿರಕ್ಕೆ ಹೋಗಿದ್ದೆ
ಕ್ಷೀರಾಭಿಷೇಕ ಮಾಡಿಸಿ
ನನ್ನ ತಪ್ಪುಗಳ
ಮನ್ನಿಸೆಂದು ಪ್ರಾರ್ಥಿಸಲು

ನಾನೊಬ್ಬ ಕ್ರೈಸ್ತ
ಚರ್ಚಗೆ ಹೋಗಿದ್ದೆ
ಮೊಂಬತ್ತಿ ಬೆಳಗಿಸಿ
ನನ್ನ ಕೆಟ್ಟ ಕರ್ಮಗಳ
ಸುಟ್ಟು ಬಿಡು ಎಂದು
ಮನವಿ ಮಾಡಲು

ಮಸೀದಿಯಲಿ
ಮಮಕಾರವಿತ್ತು
ಮಂದಿರದಲಿ
ಮಮತೆಯಿತ್ತು
ಚರ್ಚಿನಲಿ
ಮಧುರತೆ ಇತ್ತು

ನನಗೆಲ್ಲೂ…..
ಜಾತಿಗಳ ಪೆಡಂಭೂತ
ಕಾಣಲಿಲ್ಲ

ಕೇ..ವಲ

ನಮ್ಮ ತಪ್ಪುಗಳ
ಮನ್ನಿಸೆಂದು
ಮನವಿ ಮಾಡುವ
ಮಾನುಷರೇ..
ಬಹಳಿದ್ದರು
ನನ್ನ ನಿಮ್ಮ ಹಾಗೇ…
ತಪ್ಪು ಮಾಡಿದವರೇ..!!!
.

ಮಸೀದಿ ಮಂದಿರ
ಚರ್ಚಗಳಲಿ
ಮಲೀ…ನವಿಲ್ಲದ
ಮಾನವೀ‌‌‌‌…ಯತೆ
ಕಂಡು ನನ್ನ ಮನಸು
ಮಾನವನಾಗಿದ್ದಕ್ಕೆ
ಹೆಮ್ಮೆಪಟ್ಟಿತ್ತು

ಆ…ದರೆ ??

ಈ ಜಾತಿ ವಿಜಾತಿಗಳ
ಜಗಳ ವೇಕಿದೇ..??
ಎಂಬ ಸವಾಲು
ಸಮಂಜಸ ಉತ್ತರ ವಿಲ್ಲದೇ…

ಕಾಡಿದ್ದಂತೂ…
ಸತ್ಯ !!!


ಇಮಾಮ್ ಮದ್ಗಾರ

Leave a Reply

Back To Top