ಕಾವ್ಯ ಸಂಗಾತಿ
ಸುಧಾ ಪಾಟೀಲ
ಪಿಸು ಮಾತು
ಕದ್ದು ಕದ್ದು ಹೇಳುವ
ಹೃದಯದ ಗುಟ್ಟು
ಮನದ ಮಾತು
ಪಿಸು ಮಾತಾಗಿ
ಅಡಗಿತು ನನ್ನ ನಿನ್ನಲ್ಲಿ
ಯಾರಿಲ್ಲ ಸಾಕ್ಷಿ
ನಮ್ಮಿಬ್ಬರ ಮಧ್ಯೆ
ಈ ಪಿಸು ಮಾತುಗಳ
ಲೆಕ್ಕ ಹಾಕಲು ಗುಣಿಸಿ
ಎಣಿಸಿ ಭಾಗಾಕಾರ
ಹಾಕಲು
ಇದೇ ಪಿಸು ಮಾತು
ಹೊನಲಾಗಿ ಹರಿದು
ಕವನ ರೂಪ ತಳೆದು
ನಿನ್ನ ಕಣ್ಣಲ್ಲಿ
ಪ್ರೀತಿಯ ಸೆಲೆ ತುಂಬಿತು
ಕ್ಷಣ ಕ್ಷಣಕ್ಕೆ ಮೂಡಿ
ಮರೆಯಾಗುವ
ಪಿಸು ಮಾತುಗಳ
ಮೋಡಿಯ ಭಾವ
ಖೈದಿಯಾದವು
ನಮ್ಮಿಬ್ಬರಲ್ಲೆ
ಗುನುಗುನಿಸುತಿದೆ
ಪಿಸು ಮಾತುಗಳ
ಒಂದೊಂದು ಶಬ್ದ
ಇಬ್ಬರಲ್ಲೂ
ಕಣಕಣದಲ್ಲೂ
ಸಾಕ್ಷೀಭೂತವಾಗಿ
ಹೆಚ್ಛೇನೂ ಹೇಳಲಾರೆ
ಪಿಸು ಮಾತುಗಳ
ಕಲರವವ
ಕಿಣಿ ಕಿಣಿ ನಿನಾದವ
ಗುನು ಗುನು ಇಂಚರವ
ಪಿಸು ಮಾತುಗಳು
ಬೇಕು ಆಗೊಮ್ಮೆ
ಈಗೊಮ್ಮೆ ಮನಕೆ
ಮಜ್ಜನವೀಯಲು
ಹೃದಯ ಹಗುರವಾಗಲು
ಕಾದ ಮನ ತಂಪಾಗಲು
ಸುಧಾ ಪಾಟೀಲ
Beautiful poem Sudha madam
ನಿಮ್ಮ ಪಿಸು ಮಾತಿನ ಅಬ್ಬರ ತುಂಬಾ ಚೆನ್ನಾಗಿ ಮೂಡಿ ಬಂದಿದೆ ಸುಧಾ ಪಾಟೀಲ ಮೇಡಂ
ಚೆನ್ನಾಗಿ ಮೂಡಿ ಬಂದಿದೆ ಕವನ ಸುಧಾ ಪಾಟೀಲ ಮೇಡಂ
ನನ್ನ ಕವನ ಮೆಚ್ಚಿದ ಕವಿಮನಸುಗಳಿಗೆ ಧನ್ಯವಾದಗಳು