ಬಾಗೇಪಲ್ಲಿ-ಗಜಲ್

ಕಾವ್ಯ ಸಂಗಾತಿ

ಬಾಗೇಪಲ್ಲಿ

ಗಜಲ್

ನಕ್ಷತ್ರದ ಥಳುಕಿಗೆ ಮಾರುಹೋಗಿ ಬೆಳದಿಂಗಳನು ಕಡೆಗಾಣಿಸದಿರು ತಂಗೆವ್ವ
ಸಂಜೆಗತ್ತಲಾದಾಗ ಪುಟ್ಟ ದೀಪವೆಸರಿ ಸೂರ್ಯನ ನೆಚ್ಚಿಕೂರದಿರು ತಂಗೆವ್ವ

ಹಣವಂತನಾದರೆ ಸಾಲದು ಪ್ರೀತಿ ಇರಬೇಕು ಬದಲಿಗೆ ಗುಣವಂತ ನಾಗೆ ಸಾಕುಮ್ಮ
ತುತ್ತು ಅನ್ನ ಸಾಕು ಬದುಕಲು ನೀತಿ ದುಡಿಮೆ ಆಗಿರಬೇಕು ಮರೆಯದಿರು ತಂಗೆವ್ವ

ಪೊದೆಯಿಂದ ಬೇಟೆ ಆಡುವ ಎರಡಕ್ಕಿಂತ ಕೈಲಿ ಲಭ್ಯ ಇರುವ ಒಂದು ಒಳಿತಲ್ಲವೇ
ಇರುವ ಭಾಗ್ಯಕೆ ನಮಿಸಿ ಹರ್ಷಿಸು ಇಲ್ಲದಿರುವುದಕೆ ವೃಥಾ ಕೊರಗದಿರು ತಂಗೆವ್ವ

ನಿನ್ನೂರ ಗಂಗವ್ವ ನಿನ್ನ ಚನ್ನಾಗಿ ಬಲ್ಲಳು ನಿನ್ನ ಬೇಕು ಬೇಡಗಳ ಅರಿವಿದೆ ಆಕೆಗೆ
ದೂರದಾ ಕಾಶಿ ಭೈರಾಗಿ ದೇವರ ನಂಬಿ ಹೋಗಿ ಕೈಯೊಡ್ಡಿ ಬೇಡದಿರು ತಂಗೆವ್ವ

ಕೃಷ್ಣಾ! ಸುಖ ವೆಂಬುದೊಂದು ಮಾನಸಿಕ ಸ್ಥಿತಿ ಯಂತೆ ಜ್ಞಾನಿಗಳು ಹೇಳಿಹರು
ನೋವು ನಲಿವು ಅವಳಿ ಜವಳಿಯಂತೆ ಗಿಬ್ರಾನರ ನುಡಿ ಮರುಗದಿರು ತಂಗೆವ್ವ.


ಬಾಗೇಪಲ್ಲಿ

Leave a Reply

Back To Top