ಸುರೇಶ ತಂಗೋಡ-ಹಸ್ತಾಂತರ…

ಕಾವ್ಯ ಸಂಗಾತಿ

ಸುರೇಶ ತಂಗೋಡ

ಹಸ್ತಾಂತರ

ಕಾವ್ಯ ಸಂಗಾತಿ

ಸುರೇಶ ತಂಗೋಡ

ಹಸ್ತಾಂತರ

ಕಂದ ಮಲಗಿರುವಾಗಲೇ
ಕಣ್ಮರೆಯಾಗುವ
ಧಾವಂತದ ಬದುಕಿನಲಿ
ಅವರಪ್ಪನ ಪ್ರೀತಿ ಸಿಗದ ಮಗುವಿಗೆ
ತಂದೆಯ ಪ್ರೀತಿಯ ನೀಡು ಆತ್ಮಸಖಿ.

ತಾಯಿಯೊಟ್ಟಿಗೆ ತಂದೆಯಾಗಿ
ಅವನ ಬೇಕು-ಬೇಡಿಕೆಗಳನ್ನು
ಪೂರೈಸು.
ಅವನಿಗೆ ಮಾತ್ರ ಅಪ್ಪನ ನೆನಪಾಗದಂತೆ
ನಲಿಯುವಂತೆ ಮಾಡು.

ಪಾಲಕರ ಸಭೆಗೆ ನೀನೆ ಹೋಗು
ತಂದೆ ಬಂದಿಲ್ಲವೆಂಬ
ಬೇಜಾರು ಅವನಿಗಾಗದಂತೆ
ನೋಡಿಕೊ.
ಹೊಡೆದು-ಬಡಿದು ಬುದ್ಧಿ ಹೇಳದಿರು
ಮಾತಿನಲ್ಲಿ ಮನವರಿಕೆ ಮಾಡಿಸು.

ತಂದೆಯ ಕೆಲಸದ ಬಗ್ಗೆ
ಪೂರ್ತಿ ಏನನ್ನೂ ಹೇಳದಿರು…
ಅವನದೀಗ ಬಾಲ್ಯ .
ಬಾಲ್ಯದಿ ಬದುಕಲು ಬಿಡು.
ಅದಕ್ಕೆ ಇದೋ ಮಗನ ಮೇಲಿನ ತಂದೆಯ
ಜವಾಬ್ದಾರಿಯನ್ನು ನಿನಗೆ .
ಹಸ್ತಾಂತರಿಸುತ್ತಿದ್ದೇನೆ ಹರ್ಷದಿ
ಒಪ್ಪಿಸಿಕೊ ಸಂಗಾತಿ.


ಸುರೇಶ ತಂಗೋಡ

Leave a Reply

Back To Top