ಶೀಲಾ ಭಂಡಾರ್ಕರ್ ಕವಿತೆ-ಶಬ್ದ-ಸಂಬಂಧ.

ಕಾವ್ಯ ಸಂಗಾತಿ

ಶೀಲಾ ಭಂಡಾರ್ಕರ್.

ಶಬ್ದ-ಸಂಬಂಧ.

ಮನಸ್ಸು
ತೊಟ್ಟಿಕ್ಕುತ್ತಾ
ಶಬ್ದಗಳಾಗಿ, ಹಾಳೆಯ ಮೇಲೆ
ಒಂದೊಂದಾಗಿ ಬಿದ್ದು
ಹರಡಿಕೊಳ್ಳುತ್ತಾ….

ಶುರುವಿಟ್ಟುಕೊಳ್ಳುತ್ತದೆ
ಆಡಲು ಶಬ್ದಗಳ ಆಟ.
ಹೊಂದಿಕೊಳ್ಳಲು
ಹೆಣಗುವ ಭಾವನೆಗಳ ಮಾಟ.

ಕವಿತೆಯಾಗಲು ಹೊರಟ
ನಿಶ್ಶಬ್ದ ಶಬ್ದಗಳ ಅರ್ಧಂಬರ್ಧ
ಸಾಲುಗಳು.
ನೋಡಲು ಯಾವುದೋ
ನಿರ್ಭಾವುಕ ಚಹರೆಯಂತಹ
ಉಲ್ಲೇಖಗಳು.

ಹಿಂದೊಮ್ಮೆ ಮುಂದೊಮ್ಮೆ
ನಿಲ್ಲಲು ಸೆಣಸಾಟ.
ಅರ್ಥವಿಲ್ಲದವುಗಳ
ಮೂಲೆಗೆ ತಳ್ಳಾಟ

ಮನುಷ್ಯರಲ್ಲಿ ಮಾತ್ರವಲ್ಲ
ಶಬ್ದಗಳಿಗೂ ಸಂಬಂಧಗಳಲ್ಲಿ
ಹೊಂದಾಣಿಕೆ ಬೇಕು ಎಂದರೆ
ಒಪ್ಪುವಿರಾ?


ಶೀಲಾ ಭಂಡಾರ್ಕರ್.

2 thoughts on “ಶೀಲಾ ಭಂಡಾರ್ಕರ್ ಕವಿತೆ-ಶಬ್ದ-ಸಂಬಂಧ.

  1. ವಾಹ್… ನಿಜ. ಶಬ್ದಗಳ ಹುಡುಕಾಟ ಹಾಗೂ ಜೋಡಣೆಯೇ ಅಭಿವ್ಯಕ್ತಿ. ಬಹಳ ಇಷ್ಟವಾಯಿತು ಶೀಲಾ.

Leave a Reply

Back To Top