ಮಾರುತೇಶ್ ಮೆದಿಕಿನಾಳ-ಓ ಮಳೆಯೇ….!

ಕಾವ್ಯಸಂಗಾತಿ

ಮಾರುತೇಶ್ ಮೆದಿಕಿನಾಳ

ಓ ಮಳೆಯೇ….!

ಓ ಮಳೆಯೇ ಇಳೆಗೆ ಬೇಗ ಇಳಿದು ಬಾ
ಮಳೆ ಇಲ್ಲದೆ ಇಳೆಯು ಕಳೆಗುಂದಿದೆ
ಮುನಿಸೇತಕೆ ನಿನಗೆ ಕರುಣೆ ಬಾರದೆ
ರೈತನ ಮನಭಾರವಾಗಿದೆ ಬೇಗ ಬರಬಾರದೆ!

ಅಲ್ಲಲ್ಲಿ ನಿನಗಿಷ್ಟವಾದಲ್ಲಿ ನೀ ಸುರಿದರೆ
ಬಿಸಿಲ ಬರನಾಡಿಗೆ ಯಾರು ಆಸರೆ
ಮೂಕಪ್ರಾಣಿಗಳು ಪಡುತಾವ ತೊಂದರೆ
ಮಳೆಯೇ ಬೇಗ ಬಾರೆ ಕರುಣೆಯ ತೋರೇ!

ಇಲ್ಲಿ ಹಸಿರಿಲ್ಲದೆ ಅಡವಿ ಬರುಡಾಗಿದೆ
ಕೆರೆ ಕೊಳ್ಳ ಬಾವಿ ಬತ್ತಿವೆ ನೀರಿಲ್ಲದೆ
ಬಿತ್ತನೆಯಾಗೋದಿಲ್ಲ ಮುಂಗಾರು ಚುರುಕಿಲ್ಲದೆ
ಸಂತೋಷ ಉಲ್ಲಾಸವಿರದು ನೀ ಬಾರದೆ!

ಮಳೆಯೇ ನೀ ಬಂದರೆ ರೈತ ಧನ್ಯವಂತ
ನಿನ್ನ ಸುಳಿವಿಲ್ಲದಿರೆ ಸಂಕಟಪಡುವಾತ
ಆ ರೈತನೇ ನಮ್ಮೆಲ್ಲರಿಗೂ ಅನ್ನದಾತ
ಬಾ ಬೇಗ ಬಾ ರೈತನೇ ನನ್ನ ಮಗ ಎನ್ನುತ!

ಓ ಮಳೆಯೇ ಬಹಳವಿದೆ ನಿನ್ನ ಅಗತ್ಯತೆ
ನಿನ್ನ ಬರುವಿಕೆಗೆ ಕಾಯುತಿರುವಳು ಭೂಮಾತೆ
ಜೀವಸಂಕುಲಕ್ಕೆ ನೀನು ಬಾರದಿರುವ ಚಿಂತೆ
ಎಲ್ಲರ ಮನದ ಆಸೆ ನೀ ಬರಲೇಬೇಕಂತೆ!


ಮಾರುತೇಶ್ ಮೆದಿಕಿನಾಳ

One thought on “ಮಾರುತೇಶ್ ಮೆದಿಕಿನಾಳ-ಓ ಮಳೆಯೇ….!

Leave a Reply

Back To Top