ಕಾವ್ಯ ಸಂಗಾತಿ
ಚದುರಂಗದ ಹಾಸು
ಡಾ ಅನ್ನಪೂರ್ಣ ಹಿರೇಮಠ
ಕಾಲನ ಕೈಯೊಳ ಗೊಂಬೆಯು ನೀನು
ಅವನಾಟದಂತೆ ಆಡಲೇಬೇಕಲ್ಲ ನೀನು//ಪ//
ಚತುರ ಆಟಗಾರನಾತ ಎಲ್ಲದರಲೂ ವಿನೀತ
ಆಡಿಸಿ ನೋಡುತಾ ಬಿಡಿಸಿ ನಗುತಾ
ಆಡಿಸುವನು ತನ್ನಿಚ್ಛೆಯಂತೆ ಬಿಡದಲೆ
ಕಷ್ಟ ಸಂಕಷ್ಟ ನೋವು ನಲಿವುಗಳ
ನೀಡುತಾ ಪಳಗಿಸುತ ಉಳಿಏಟು ಕೊಡದಿರನು//
ಚದುರಂಗದ ಹಾಸು ಹಾಸಿಹನಿಲ್ಲಿ
ತಿರುಗಿಸಿ ತಿರುಗಿಸಿ ಗಾಳ ಹಾಕುತ
ಕಾಯಿ ಎಸೆಯುತ ರಣರಂಗ ಹುರಿದುಂಬಿಸಿ
ಯುದ್ಧ ಕೌಶಲ್ಯ ಬುದ್ಧಿಜಾನ್ಮೆ ಶಕ್ತಿಗಳ
ಹೊರಗೆಳೆಯುತಾ ಚಾಟಿ ಬೀಸುತಲೆ ಇರುವನವ//
ಸವಾಲುಗಳ ಹಾಕಿ ಸೆಡ್ಡು ಹೊಡೆಯುವ
ಏಟುಗಳ ಕೊಟ್ಟು ಮುಗುಳುನಗೆ ಬೀರುವ
ತಾಳುವ ಶಕ್ತಿಯ ಕಲಿಸಿ ಕೊಡುತಲೆ
ನಿತ್ಯ ಗೆಲುವಿನ ಪತಾಕೆ ಹಾರಿಸುವನವನು
ತೋರಿಸುವನು ಜಗದಾಟ ತಾಳ್ಮೆ ಕಲಿಸುತ//
ಸುತ್ತುವ ಬುಗುರಿಯಾ ದಾರ ಆತನದು
ನಾಟಕ ರಂಗವಾ ರಂಗೇರಿಸಿ ಪರದೆ ಎಳೆವ
ಕೈಚಳಕದ ಘಾರುಡಿಗ ಸೂತ್ರದಾರ
ಮೀರಿಸುವವರಿಲ್ಲ ಸರಿಸಮನಾರಿಲ್ಲ
ಅವನಂತ ಶೂರರು ಯಾರಿಲ್ಲ ಅವ ಜಗಮಲ್ಲ//
ಡಾ ಅನ್ನಪೂರ್ಣ ಹಿರೇಮಠ
ಅದ್ಭುತ
ವಾಹ್!!
ಎಂದಿನಂತೆ ಚೆನ್ನಾಗಿದೆ