ಬಾಗೇಪಲ್ಲಿ- ಗಜಲ್

ಕಾವ್ಯ ಸಂಗಾತಿ

ಬಾಗೇಪಲ್ಲಿ

ಗಜಲ್
(ನಿದ್ರಾವಿಚಾರ)

ನಿದ್ರೆಯ ಅರೆ ಮರಣಕೆ ಹೋಲಿಪರುಅದು ನಿಜವಲ್ಲವೆ
ದೇಹದಾರೋಗ್ಯಕೆ ಅದು ಅಗತ್ಯ ಮೇವು ಅಹುದಲ್ಲವೆ

ಕಾಯವನು ನಿದ್ದೆಗೆ ಒಯ್ಯಲು ಅದು ತಂಪಾಗಬೇಕು
ಸಾಯುತಿರುವನ ಒಡಲು ಆಗ ತಣ್ಣಗೆ ಆಗುವುದಲ್ಲವೆ

ಚಿಂತೆ ಇಲ್ಲದವರಿಗೆಲ್ಲಾ ಸಂತೆಯಲೂ ನಿದ್ದೆ ಎನುವರು
ಪ್ರಿಯತಮೆಯ ನೆನಪಿನ ಸುಳಿಯಲಿ ನಿದ್ದೆ ಬಾರದಲ್ಲವೆ

ಸಖಿಯ ಕನಸುತ ನಿದ್ರೆಯದು ಅರೆನಿದ್ದೆ ಆನಿಸುವುದು
ಸ್ವಪ್ನವಿಹಾರ ಇಲ್ಲದ ನಿದಿರೆ ಪ್ರೇಮಿಗಳಿಗೆ ಬೇಡವಲ್ಲವೆ

ಬದುಕಿನ ಅರ್ಧಭಾಗ ಶಯನ ಗೃಹದಿ ಕಳೆಯುವೆವು
ಕುಂಭಕರ್ಣನ ನಿದ್ರಾಹ್ವಾನ ಮನುಜರಿಗೆ ಕಷ್ಟವಲ್ಲವೆ

ಕೃಷ್ಣಾ! ಪ್ರೀತಿಯ ಬೀದಿಯಲಿ ನಿದ್ರೆ ನೀಲಾಂ ಆಗಿದೆಯಂತೆ
ಮನೋರಮೆಯ ನೆನಪಿನ ನಿದ್ದೆ ಅತೀ ಮಧುರವಲ್ಲವೆ


ಬಾಗೇಪಲ್ಲಿ

Leave a Reply

Back To Top