ಕಾವ್ಯ ಸಂಗಾತಿ
ಗುಣಾಜೆ ರಾಮಚಂದ್ರ ಭಟ್
ಕವಿ ಮನಸು
ಕವಿತೆಯನೋದುತ ಸವಿಯಲು ಸಂತಸ
ದಿವಸವು ಕವನ ಬರೆ ಕವಿಯೆ..
ಕವಿದಿವೆ ಭಾವನೆ ಕವಿಯೆದೆ ತುಂಬಿದೆ
ದವನದ ಹಾಗೆ ಪರಿಮಳಿಸೆ ..
ಮೂಡುತ ಬರುತಿದೆ ಹಾಡುವ ರಚನೆಯು
ದೂಡಲು ಬೇನೆ ಮನಸಿನಲಿ..
ಗಾಯಕಿ ಗಾನವು ದಾಯಕ ತೋಷವು
ಮಾಯದೆ ನಿಂತು ಪುಳಕಿಸಿದೆ..
ಚಂದದ ಬರೆಹವು ನಂದದುಯೆಂದಿಗು
ಸಿಂಧುವು ನಮ್ಮ ಕವಿ ಮನಸು..
ಸಾವಿರ ವರುಷವು ಸಾವನು ಕಾಣದ
ಜೀವನ ಕವಿಗೆ ವರವಹುದು ..
ಮನ್ನಿಸಿ ಕವಿಗಳ ಹೊನ್ನನು ನೀಡುತ
ಬಣ್ಣಿಸಿಯವನ ಹಿರಿಮೆಯನು..
ದವನ =ಪಚ್ಚೆತೆನೆ(ಸುವಾಸನೆಯುಳ್ಳ ಒಂದು ಬಗೆಯ ಎಲೆಯುಳ್ಳ ಗಿಡ),ದಾಯಕ= ನೀಡುವ;ಸಿಂಧು=ಕಡಲು .
ಗುಣಾಜೆ ರಾಮಚಂದ್ರ ಭಟ್