ಪ್ರಭಾ ಅಶೋಕ ಪಾಟೀಲ ಬೆಳಗಾವಿ-ನಮ್ಮನೆ ಮುದ್ದುಕೃಷ್ಣ

ಕಾವ್ಯ ಸಂಗಾತಿ

ಪ್ರಭಾ ಅಶೋಕ ಪಾಟೀಲ

ನಮ್ಮನೆ ಮುದ್ದುಕೃಷ್ಣ

ಗೋಲು ಮುಖದ ನಂದನು
ಕಿಲಕಿಲ ಎಂದು ನಗುವನು
ಎಲ್ಲರ ಮನವ ಸೆ ಳೆವನು
ಚಿನ್ನ ರನ್ನ ಬಂಗಾರನು

ಹಠಮಾಡಿ ಅಳುವನು
ಕ್ಷಣದಲದನು ಮರೆವನು
ಆಟ ವಾಡಿನಲಿವನು
ಕಪಟವರಿಯದ ಮುದ್ದು ಕಂದನು

ಪುಟ್ಟ ಪುಟ್ಟ ಕೈ ಪುಟ್ಟ ಪುಟ್ಟ ಕಾಲು
ಹ ವಳದ ತುಟಿಯ ಸಿಹಿ ಜೇನ ಜೊಲ್ಲು//
ಬೊಚ್ಚುಬಾಯ ಅರಳಿಸಿ ನಗುವನು //
ಪುಟಿದು ಪುಟಿದು ಕುಣಿವನು //

ಬಾಲಕೃಷ್ಣ ಬಾಲ ಗೋಪಾಲನು
ತುಂಟಾಟದಿ ಮೈಮರೆವನು
ಅರಳು ಕಂಗಳ ಚೆಲುವನು
ಮೂಡಿ ಮಾಡಿ ಗೆಲ್ಲುವನು


ಸರ ಸರನೇ ಸರಿಯುತಲಿ
ತೊಡೆಯನೆನೇರಿ ಕುಳಿತನು
ನಮ್ಮನೆಯ ಮುದ್ದುಕೃಷ್ಣನು

ಚಂದನದ ಸಿರಿಯಿ ವನು
ಬಂಗಾರದ ಖ ಣಿ ಅವನು
ನಮ್ಮನೆಯ ಮುದ್ದು ಸಿರಿಯವನು
ಅಜ್ಜಿ ಮನೆವ ಕದ್ದವನು


ಪ್ರಭಾ ಅಶೋಕ ಪಾಟೀಲ

One thought on “ಪ್ರಭಾ ಅಶೋಕ ಪಾಟೀಲ ಬೆಳಗಾವಿ-ನಮ್ಮನೆ ಮುದ್ದುಕೃಷ್ಣ

Leave a Reply

Back To Top