ಆಶಾ ಯಮಕನಮರಡಿ ಕವಿತೆ-ಗಜಲ್

ಕಾವ್ಯ ಸಂಗಾತಿ

ಆಶಾ ಯಮಕನಮರಡಿ

ಗಜಲ್

ಕಾಡು ಶಿಲೆಯಲಿ ಶಿಲ್ಪ ಮೂಡುವುದು ಗೆಳತಿ
ನಾಡ ಜನರಿಗೆ ದೇವರಾಗುವುದು ಗೆಳತಿ

ಬದುಕನರಿಯಲು ಕಷ್ಟ ಸುಖ ತಿಳಿದಿರಬೇಕು
ಉಳಿ ಏಟಿನಿಂದಲೆ ಕಲ್ಲು
ಮೂರ್ತಿ ಆಗುವುದು ಗೆಳತಿ

ಪ್ರತಿ ರೂಪದಾ ಗುರುತಿಗೆ ಚಹರೆ ಇದೆ
ಗುಣದಿಂದಲೆ ನಿಜ ಮನುಜನಾಗುವುದು ಗೆಳತಿ

ಸಾರ ಬೇಕಿದೆ ಜಗಕೆ ಈ ಸತ್ಯವನ್ನು
ತಾಳ್ಮೆಯಲಿ ಬದುಕಿದಾಗಲೆ ಫಲ ಸಿಗುವುದು ಗೆಳತಿ

ಹೇಳುವುದು ಬಲು ಸುಲಭ ಎನ್ನದಿರು
ಆಶಯದಿ ಬದುಕಿದಾಗಲೆ
ಸಾರ್ಥಕವಾಗುವುದು ಗೆಳತಿ


ಆಶಾ ಯಮಕನಮರಡಿ

One thought on “ಆಶಾ ಯಮಕನಮರಡಿ ಕವಿತೆ-ಗಜಲ್

Leave a Reply

Back To Top