ಸುಧಾ ಪಾಟೀಲ ಕವಿತೆ- ಸ್ನೇಹ ಕುಲುಮೆ

ಕಾವ್ಯ ಸಂಗಾತಿ

ಸುಧಾ ಪಾಟೀಲ

ಸ್ನೇಹ ಕುಲುಮೆ

3

ಸ್ನೇಹದೊರತೆಯ ಕಾಪಿಟ್ಟು
ಹೃದಯದಿ ಬಂಧಿಸಿಟ್ಟು
ಯಾರ ಕಣ್ಣಿಗೂ ಬೀಳದ ಹಾಗೆ
ಕಾಯಬೇಕಾಗಿದೆ

ಅಂತರಗಂಗೆಯಂತೆ ನಿಧಾನವಾಗಿ
ಜುಳು ಜುಳು ನೀರಿನ0ತೆ ಹರಿಯುವ ಈ ಸ್ನೇಹದ ಸೆಲೆಯನ್ನು
ಅಂಗೈಯಲ್ಲಿ ಮುಚ್ಚಿಟ್ಟು
ಜತನ ಮಾಡಬೇಕಿದೆ

ಸ್ನೇಹದ ಕುಲುಮೆಯ
ಅನಾವರಣಗೊಳಿಸದಂತೆ
ತಿಳಿ ತಿಳಿಯಾಗಿ ಹರಡಿ
ಮನದಲ್ಲಿ ಬಚ್ಚಿಡಬೇಕಾಗಿದೆ

ಅನ್ಯರ ದೃಷ್ಠಿ ತಾಗದಂತೆ
ಬೇರೆಯವರ ವಿಚಾರಗಳಿಗೆ
ನಿಲುಕದಂತೆ ಪವಿತ್ರತೆಯಲಿ
ಕಾಪಾಡಬೇಕಿದೆ

ಸ್ನೇಹದ ಭಾಷೆಯ ಅರಿತು
ಮೆಲುದನಿಯಲಿ ಹಾಡಿ ಹೊಗಳಿ
ರಂಗವಲ್ಲಿ ಹಾಸಿ ಹುರುಪಿನಿಂದ
ಸಂಭ್ರಮಿಸಬೇಕಾಗಿದೆ

ಸ್ನೇಹವೇ ಎಲ್ಲವೂ ಆಗಿ
ನಿಷ್ಕಲ್ಮಶ ಪ್ರೀತಿಯ ತೋರಿ
ಭಾಂದವ್ಯವ ಕಟ್ಟುತ ನಾವು
ಗೆಳೆತನ ಜೋಡಿಸಬೇಕಾಗಿದೆ

ಪ್ರೀತಿ ಪ್ರೇಮದ ಗೊಡವೆಯಿಲ್ಲದೆ
ಸ್ನೇಹದ ಚಿಲುಮೆಯಸದಾ ಉಕ್ಕಿಸಿ
ನಸುನಗುವ ಹಾರೈಕೆಯೊಂದಿಗೆ
ಉಳಿಸಿಕೊಳ್ಳಬೇಕಾಗಿದೆ


Leave a Reply

Back To Top