ಡಾ.. ಮೀನಾಕ್ಷಿ ಪಾಟೀಲ್ ಕವಿತೆ-ಇಳೆಗೆ ಮಳೆ

ಕಾವ್ಯ ಸಂಗಾತಿ

ಡಾ.. ಮೀನಾಕ್ಷಿ ಪಾಟೀಲ್

ಇಳೆಗೆ ಮಳೆ

ಗ್ರೀಷ್ಮ ಋತುವಿಗೆ ಬೆಂಕಿ ಕೆಂಡದಂತೆ
ಉರಿ ಉರಿ ಉಗ್ಗರ
ಧರಣಿ ದೇವಿಯ ಮೇಲೆ
ನಿನಗ್ಯಾಕೋ ಸಿಟ್ಟು ರವಿತೇಜ
ಆಕೆ ನಿನಗೆ ಮಾಡಿದ್ದಾದರೂ ಏನು
ನೀನೇ ಜೀವ ತುಂಬಿದ ಮಕ್ಕಳನ್ನೆಲ್ಲ ಒಡಲಲ್ಲಿಟ್ಟುಕೊಂಡು ಪೊರೆಯುತಿಹಳು
ಗಿಡ -ಮರ ಜನ -ದನ ಕಲ್ಲು -ಮಣ್ಣು
ತಾಳ್ಮೆ ಒಂದೇ ಅವಳಿಗೆ …
ಸಹನೆಯ ಪರೀಕ್ಷೆಯೇ
ನಿನ್ನ ಬಿಸಿಯ ಉಸಿರಿಗೆ
ತತ್ತರಿಸುತ್ತಿವೆ ಕರುಳ ಕುಡಿಗಳು
ಕರುಣೆ ತೋರು
ಕಪ್ಪನೆಯ ಮೋಡಗಳು
ತುಂಬಿ ತುಂಬಿ ಹರಸಲಿ
ಜೋರೆಂಬ ಮಳೆಯು ಹನಿ ಹನಿ ಹನಿಸಲಿ
ಭೂತಾಯಿ ನಕ್ಕು ನಕ್ಕು ನಲಿಯಲಿ
ನೆಲಮುಗಿಲು ಒಂದು ಮಾಡಿ ಹಣಿಯಲಿ
ಅಷ್ಟೆತ್ತರದಾ ಬಾನು ಇಳೆಗೆ ಹನಿಸುವುದೇಕೆ
ಪ್ರಕೃತಿ ಪುರುಷನ ಪ್ರೇಮದಾಟಕೆ ಉತ್ತರವಿಲ್ಲ ಮುನಿಸಿಕೊಂಡು ಉರಿಯುತ್ತಿದ್ದ
ಕೆಂಡದಂತ ಕಣ್ಣಿನಲ್ಲಿ ಪ್ರೇಮದ ಕಣ್ಸನ್ನೆ
ಯಾವಾಗ ಮೂಡಿತೋ
ತುಂತುರು ಹನಿ ಹನಿ ಹುಡುಗಾಟವೊ
ಇಳೆಯ ಮೈಯ ತೊಯ್ದು ತಂಪಾಗುವ ಸ್ಥಿತಿ ಅರಳುವಳು ಮನತುಂಬಿ
ನಗುವಳು ಬಾಯಿ ತುಂಬಿ
ಭುವಿಯ ಬೆಡಗಿ


One thought on “ಡಾ.. ಮೀನಾಕ್ಷಿ ಪಾಟೀಲ್ ಕವಿತೆ-ಇಳೆಗೆ ಮಳೆ

  1. ತುಂಬಾ ಸೊಗಸಾದ ಅರ್ಥಪೂರ್ಣ ಕವಿತೆ!
    ಅಭಿನಂದನೆಗಳು ಡಾ ಮೀನಾಕ್ಷಿ ಮೇಡಂರಿಗೆ.

Leave a Reply

Back To Top