ಗೌರಿ ಪ್ರಿಯ- ಗಜಲ್

ಕಾವ್ಯ ಸಂಗಾತಿ

ಗೌರಿಪ್ರಿಯ

ಗಜಲ್

ಹಾಡ್ತಾವಲ್ಲೇ ಹಣೆ ಕೆಂಪು ಕುಂದಣ ಕುಸುರಿಯ ಈ ನಿನ್ನ ಝುಮುಕಿ
ಕಾಡ್ತಾವಲ್ಲೇ ಹಳೆ ನೆನಪ ಕರಿ ಕಣ್ಣ ಕಾಡಿಗೆಯ ಈ ನಿನ್ನ ಝುಮುಕಿ

ಮೆಲ್ಲುಸಿರಲಿ ಮಾತಾಡ್ತಾ ಹಾದಿ ಬೀದಿ ಗುಂಟ ನನ್ನನ್ನೇ ಕರಿತಾವ ನೋಡು
ಚಂದನದ ಮೈ ಬಣ್ಣ ಕಂಪ ಸೂಸಿ ಮುಡಿದಾ ಮಲ್ಲಿಗೆಯ ಈ ನಿನ್ನ ಝುಮುಕಿ

ಪಿಸು ಮಾತಲಿ ನಿನ್ನುಸಿರ ತಾಗಿ ಝಲ್ಲೆಂದಿತು ಒಲವಿನ ರಾಗ
ರಿಂಗಣಿಸಿತು ಹಸಿರು ಗಾಜಿನ ಚುಕ್ಕಿ ಬಳೆಯ ಈ ನಿನ್ನ ಝುಮುಕಿ

ನೀ ಕೊಟ್ಟ ಮುತ್ತು ಗುಲಾಬಿ ಕೆನ್ನೆಗೊಂದು ಕುಣಿತಾವ ಅಧರ ಜೋಡಿ
ಹರಡಿತೆಲ್ಲೆಡೆ ಮತ್ತಿನಾಟದ ರಂಗಿನ ಓಕುಳಿಯ ಈ ನಿನ್ನ ಝುಮುಕಿ

ನಿದ್ದೆ ಕೆಡಿಸುವ ನಾಸಿಕದಾ ನತ್ತು ಕಣ್ತುಂಬ ಕನಸ ತೋರಿಸುತ ಸತಾಯಿಸುತ್ತದಲ್ಲೇ
ಮನದಾಗಸದ ತುಂಬ ಚುಕ್ಕಿಗಳ ರಂಗೋಲಿ ನಗುವ ಮನದನ್ನೆಯ ಈ ನಿನ್ನ ಝುಮುಕಿ

ಕಣ್ಸನ್ನೆಯಲಿ ಕರೆದು ಝರಿಯಾಗಿ ಹರಿಸಿದೆನ್ನನು ನಿನ್ನ ಬಾಹು ಬಂಧನದೊಳಗೆ
ಬಳಕುವಾ ಬಳ್ಳಿಗೆ ಸೊಂಟಕ್ಕಪ್ಪಿದ ತೋರಣ ಕೇಶ ರಾಶಿಯ ಈ ನಿನ್ನ ಝುಮುಕಿ

ನೀ ಬಂದು ನಿಂತಾಗ ನವಿಲುಗಳ ನರ್ತನ ಹೊನಲಾಯಿತು ನನ್ನೊಳಗೆ
ಬೆಳ್ಳಿ ಕಾಲ್ಗೆಜ್ಜೆ ಘಲರಿಗೆ ಸುವ್ವಾಲೆ ಹಾಡಿನಾ ಸುಗ್ಗಿ ಗೌರಿಯ ಈ ನಿನ್ನ ಝುಮುಕಿ
—————-[

One thought on “ಗೌರಿ ಪ್ರಿಯ- ಗಜಲ್

Leave a Reply

Back To Top