ಕಾವ್ಯ ಸಂಗಾತಿ
ಡಾ ಶಶಿಕಾಂತ ಪಟ್ಟಣ ರಾಮದುರ್ಗ
ನಮ್ಮವ್ವ
ನಮ್ಮವ್ವ ಹಡೆದವ್ವ
ಸತ್ತಿಲ್ಲ ನನ್ನವ್ವ
ಬದುಕಿಹಳು
ನೆಲದೊಳಗೆ ನನ್ನೊಳಗೆ
ಜೀವವಿಟ್ಟಳು ತಾಯಿ
ಹಸಿದಾಗ ಬಿಸಿ ರೊಟ್ಟಿ
ಹುಳಿ ಬಾಣ ನುಚ್ಚ
ಗಂಗಾಳದೊಳಗ
ಸಿಹಿ ಮಜ್ಜಿಗಿ ಉಂಡಾಗ
ನನ್ನವ್ವ ನೋಡಿ ನಕ್ಕಾಳ
ನನ್ನೆಂದು ಬಡೆದಿಲ್ಲ
ಕಿವಿ ಹಿಂಡಿ ಬೈದಿಲ್ಲಾ
ಸೆಟಗೊಂಡು ಕುಂತರ ರಮಿಶಾಳ
ನನ್ನವ್ವ ಹಬ್ಬದ ಅಡುಗೆ
ಉಣಶಾಳ
ಜಾತರಿ ಬಂತಂದ್ರ
ಹೊಸ ಅಂಗಿ ಚಡ್ಡಿ
ಆಡಾಕ ಕೈ ಕಟ ಬಗರಿ
ನಮ್ಮವ್ವ ಬೆಂಡು ಬೆತ್ತಾಸ
ಉಡಿಯೊಳಗ
ಹಸಿದು ತಾ ಮಲಗಿದರೂ
ಕೈ ತುತ್ತು ತಿನಿಶಾಳ
ಬಳಪ ಪಾಟಿ ಕೈ ಚೀಲ ಕೊಡಿಸಿ
ಸಾಲಿಗೆ ನನ್ನ ಕಳಿಶಾಳ ನಮ್ಮವ್ವ
ನಮಗಾಗಿ ಹರಕಿ ಹೊತ್ತಾಳ
ಸತ್ತಿಲ್ಲ ನನ್ನವ್ವ
ಶಾಂತಿ ಮಮತೆಯ ಮೂರ್ತಿ
ಸ್ನೇಹ ಸಮತೆಯ ಪ್ರೀತಿ
ನಮ್ಮ ಮನೆತನದ ಕೀರ್ತಿ
ನನ್ನವ್ವ ನನ್ನೊಳಗೆ ಬದುಕ್ಯಾಳೋ _
ಅಬ್ಬಾ ಹೃದಯ ಸ್ಪರ್ಶ ಕವನ ಸರ್
ಅತ್ಯಂತ ಭಾವಪೂರ್ಣ ಕವನ
ಅವರು ನಿಮ್ಮೊಂದಿಗೆ ಸದಾ ಇದ್ದಾರೆ ಸರ್
ಹೃದಯ ಕಲಕುವ ಕವನ ಸರ್
ಅತ್ಯುತ್ತಮ ಕವನ ಸರ್
ನನ್ನ ತಾಯಿಯ ಬಾಲ್ಯದ ನೆನಪು
Absolutely heart warming poem!
ನಮ್ಮ ಮನೆತನದ ಕೀರ್ತಿ…
ನನ್ನವ್ವ ನನ್ನೊಳಗೆ ಬದುಕ್ಯಾಳೋ…
ಎಷ್ಟು ಅಗಾಧವಾದ… ಕರುಳಬಳ್ಳಿಯ ಸಂಬಂಧ…
ನಿಮ್ಮಲ್ಲೇ ಒಂದಾಗಿರುವ ನಿಮ್ಮ ಅವ್ವನ ಅಸದಳ
ಪ್ರೀತಿ ಕವನದ ತುಂಬೆಲ್ಲ ಹರಿದಾಡಿ … ಎಲ್ಲರಿಗೆ ಅವರ ತಾಯಿಯ ನೆನಪನ್ನು ತರಿಸುವದಂತೂ ಸತ್ಯ
ಸೂಪರ್ ಸರ್