ಕಾವ್ಯ ಸಂಗಾತಿ
ಡಾ.ಶಾರದಾಮಣಿ ಎಸ್.
ಸುಧೆಗೆ ಕಳೆ
ಮೊದಲ ಮಳೆ
ತಂಪಾಯ್ತು ಇಳೆ.
ವಸುಧೆಗೆ ಬಂತು
ನವ ಕಳೆ.
ತುಂತುರು ಮಳೆ
ಹಸ್ತಾಕ್ಷರ ಹಾಕುತ್ತಿರಲು
ಸಂಬ್ರಮಿಸಿದ ಇಳೆ.
ಮೊದಲ ಮಳೆ
ಸುಧೆಗೆ ಕಳೆ.
ಬಣ್ಣವಿರದ ಹನಿಗಳು.
ಅವನೀಗೆ ಬಣ್ಣ ತುಂಬಿ
ಈ ಧರೆ ಸ್ವರ್ಗವಾಗಿಸಲು
ಅವತರಿಸಿದ ಮುಂಗಾರು.
ಪಚ್ಚೆಲೆಗಳಿಗೆ ಮುತ್ತ ತೊಡಿಸಿ,
ತುಂತುರು ಮಳೆ
ನಲಿದಾಡುತ್ತ ಆಗಮಿಸಲು
ಸಂಬ್ರಮಿಸಿದ ಇಳೆ.
ಪ್ರತಿ ಹನಿ ಶೃತಿಯಾಗಿ
ಸಕಲ ಜೀವರಾಶಗಳಿಗೆ
ಆಸರೆಯಾಗಿ.
ಜೀವ ಭಾವ ತಣಿಸಿ,
ನೊಂದ ಬಾಳು
ಸಂತೈಸುತಿಹ ಮಳೆ,
ರೈತನ ಮೊಗಕೆ
ಉಲ್ಲಾಸತಂದ
ಮೊದಲ ಮಳೆ.
ಬ್ಯೂಟಿಫುಲ್ ಕವನ ಮೇಡಂ
ತುಂಬಾ ಧನ್ಯವಾದಗಳು.