ಕಾವ್ಯ ಸಂಗಾತಿ
ಕಾಡಜ್ಜಿ ಮಂಜುನಾಥ
ಸಂಸಾರ ಸಾಗರ
ಸಂಸಾರ ಸಾಗರದಿ
ಈಜಲು ಮನವಾಗಬೇಕು
ಶಾಂತಸಾಗರ,
ಅಹಂಕಾರದ ಕೋಟೆಯ
ಮನದಲಿ ಕಟ್ಟಿ,
ಒಲವಿನ ಹೃದಯವ
ದೂರದಿ ಅಟ್ಟಿದರೆ
ಬದುಕು
ಮೂರಾಬಟ್ಟೆ,
ನಂಬಿಕೆಯ
ಗೋಡೆಯೇ ಬಿರುಕಾಗಿ
ಮಾತಿನ ಸಿಡಿಲಿಗೆ
ಸಂಬಂಧ ಪುಡಿಯಾದ
ಮಣ್ಣಂಗಟ್ಟಿ;
ಹಣ ಅಧಿಕಾರದ
ಮದವು,ಜೀವನ
ಮುಳುಗಿಸುವ
ಪ್ರವಾಹವು,
ಚಟದ ಗಂಡಿಗೆ
ಹಟದ ಹೆಣ್ಣಿಗೆ
ಜೀವನ
ಸಿಗರೇಟಿನ ಹೊಗೆಯಂತೆ
ಎಳೆದಾಗ ಸವಿ,ಬಿಟ್ಟಾಗ
ವಿಷದಂತೆ ಭವಿಷ್ಯ
ನರಕ,
ಮನಸರಿಯದ ಎದೆಗಳು
ಚಾಡಿಕೋರರ ಬಾಯಿಗೆ
ಆಹಾರ,
ಬದುಕಿನ ವಿನಾಶಕ್ಕೆ
ತಾವೇ ಮಾಡಿಕೊಂಡ
ಸಂಚಕಾರ !!