ಕಾವ್ಯ ಸಂಗಾತಿ
ಹಮೀದಾ ಬೇಗಂ ದೇಸಾಯಿ
ಕತ್ತು ಮತ್ತು ಕತ್ತಿ….
ನಯವಾದ ರೇಶಿಮೆ
ಪರದೆಯ ಹಿಂದೆ
ಅಡಗಿದೆ ಮಸೆದ ಕತ್ತಿ
ಗೀರಲು ಶ್ವೇತ ಕತ್ತನು
ಸದ್ದಿಲ್ಲದೆ ಹೊಂಚು ಹಾಕಿ..
ಕತ್ತಿಗೇನು ಗೊತ್ತು
ನೆತ್ತಿಯ ಮೇಲೆ
ತೂಗುತಿದೆ ಕತ್ತಿ ಎಂದು..?
ಕುಸುರಿಯ ಅಂದ
ಕಂಡು ಬೆರಗಾಗಿದೆ
ಮುಗ್ಧ ಶ್ವೇತ ಕತ್ತು
ಅರಿಯಲಾರದೆ ಬಂದ ಆಪತ್ತು…
ಯಾವ ಗಳಿಗೆಯಲೋ
ಅದರ ಆಕ್ರಮಣ
ಬದುಕಿನ ಸಂಕ್ರಮಣ
ತುಂಡುಗಳಾಗಿ
ನೆಲಕೊರಗಿ ಚಲ್ಲಾಪಿಲ್ಲಿ
ನಯವಂಚಕ ಕತ್ತಿಯ ಕ್ರೌರ್ಯದಲಿ…!!
ಕತ್ತಿಯೊಳಗಿನ ಅರ್ಥ ಗೂಢಾರ್ಥಗಳು ಬಹಳ ಮಾರ್ಮಿಕವಾಗಿ ಮೂಡಿಬಂದಿದೆ.
ಒಳ್ಳೆಯ ಅರ್ಥ ಗರ್ಭಿತ ಕವನ
ಮೆಚ್ಚುಗೆಗೆ ಧನ್ಯವಾದಗಳು ತಮಗೆ.