ನಳಿನಾ ದ್ವಾರಕ್ ನಾಥ್-ಮಧುರ ಮೋಹನ

ಪುಸ್ತಕ ಸಂಗಾತಿ

ಕವನ ಸಂಕಲನ :ಮಧುರ ಮೋಹನ

ಕವನ ಸಂಕಲನ :
ಮಧುರ ಮೋಹನ
ಕವಿಯತ್ರಿ:ನಳಿನಾ ದ್ವಾರಕ್ ನಾಥ್
ವಿದ್ಯಾಭ್ಯಾಸ:ಬಿ.ಕಾಂ ಪದವೀಧರೆ
ಓದಿದ್ದು ಬೆಳೆದ್ದದ್ದು ಸಂತೇಬಾಚಹಳ್ಳಿ
ಊರು:ಬೆಂಗಳೂರು
ಪ್ರಥಮ ಮುದ್ರಣ-2023
ಹಕ್ಕುಗಳು-ನಳಿನಾ ದ್ವಾರಕ್ ನಾಥ್
ಪುಟಗಳು-90
ಕವನಗಳ ಸಂಖ್ಯೆ-:75
ಪುಸ್ತಕದ ಬೆಲೆ-;120/-
ಪ್ರಕಾಶನದ ಹೆಸರು-:ಹೆಚ್.ಎಸ್.ಆರ್.ಎ.ಪ್ರಕಾಶನ

ವಿಳಾಸ-#ಶ್ರೀ ಅನ್ನಪೂರ್ಣೇಶ್ವರಿ ನಿಲಯ
1ನೇ ಮುಖ್ಯ ರಸ್ತೆ,ಭೈರವೇಶ್ವರನಗರ,ಲಗ್ಗೆರೆ,
ಬೆಂಗಳೂರು-560058
ಮೊಬೈಲ್ ಸಂಪರ್ಕ ಸಂಖ್ಯೆ-:7892793054

ಕವಿಯತ್ರಿಯವರು ತಮ್ಮ ಚೊಚ್ಚಲ ಕವನ ಸಂಕಲನ “ಮಧುರ ಮೋಹನ “ಕೃತಿಯನ್ನು ತಮ್ಮ ಪೂಜ್ಯ ತಂದೆ ಶ್ರೀ ರಾಮಸ್ವಾಮಿ ಐಯ್ಯಂಗಾರ್ -ತಾಯಿ-ಸುಭದ್ರಮ್ಮ
ನವರಿಗೆ ಅರ್ಪಿಸಿರುವರು.ಈ ಚಂದದ ಕೃತಿಗೆ ಮುನ್ನುಡಿ ಬರೆದಿರುವವರು ಖ್ಯಾತ ಸಾಹಿತಿಗಳಾದ ಶ್ರೀಯುತರಾದ ಪದ್ಮನಾಭರವರು.
ಈ ಚೊಚ್ಚಲ ಕವನ ಸಂಕಲನ ಕೃತಿಗೆ ಚಂದದ ಆಶಯನುಡಿ ಬರೆದಿರುವ ಇಬ್ಬರು ಖ್ಯಾತ ಕವಿಯತ್ರಿಯರಾದ -ಶ್ರೀಮತಿ ಪೂರ್ಣಿಮಾ ಉಡುಪ
ಹಾಗೂ ಚೈತನ್ಯ ಬಾಲಕೃಷ್ಣ ಅವರು
ಕವಿ ದಿಗ್ಗಜರಾದ ಶ್ರೀಯುತ ವಿಶ್ವನಾಥ ಮದ್ದಿಬಂಡೆ
ಹಾಗೂ ಹುಸೇನ್ ಯರಗಲ್ ಹಾಗೂ ಸಾಹಿತ್ಯ ಸಿರಿ ಸಂಸ್ಥಾಪಕರಾದ ಶ್ರೀಯುತ ರವಿಸುಗಮ್ ಅವರು ಈ ಚಂದದ ಕೃತಿಗೆ ಆಶಯನುಡಿಯನ್ನು ಬರೆದು ಹರಸಿ ಹಾರೈಸಿದ್ದಾರೆ.

ಈ ಚಂದದ ಕೃತಿ ಮಧುರ ಮೋಹನ ಚೊಚ್ಚಲ ಕವನ ಸಂಕಲನಕ್ಕೆ ಬೆನ್ನುಡಿ ಬರೆದಿರುವ ಮುಖಪುಟದ ಜ್ಞಾನ ತೃಷೆ ಕನ್ನಡ ಸಾಹಿತ್ಯ ವೇದಿಕೆಯ ಸಂಸ್ಥಾಪಕರಾದ ಶ್ರೀಯುತ ಆರ್.ಬಿ.ವೀರೇಶ್ ಅವರು ಕವಿಯತ್ರಿಯ ಕಾವ್ಯ ಯಾತ್ರೆ ನಿರಂತರ ಮುಂದುವರೆಯಲಿ ಮತ್ತಷ್ಟು ಚಂದದ ಸಾಲು ಸಾಲು ಕೃತಿಗಳು ಲೋಕಾರ್ಪಣೆ ಯಾಗಲೆಂದು ಶುಭ ಕೋರಿ ಹಾರೈಸಿದ್ದಾರೆ.

ಸುಮಾರು 75 ವಿಭಿನ್ನ ರಚನೆಯ ಚಂದದ ಕವನಗಳು ಭಕ್ತಿಗೀತೆಯಿರುವ ಈ ಕೃತಿಯ ಮೊದಲ ಭಕ್ತಿಗೀತೆ ವಿಘ್ನ ನಾಶಕ
ಗಣಪತಿ ಬೊಪ್ಪನ ಕುರಿತಾದ
“ಮೋದಕ ಪ್ರಿಯ “ಶೀರ್ಷಿಕೆ ಕವಿತೆ.

ಗೌರಿ ತನಯ ಬಾಲ ಗಣಪತಿ ಬೊಪ್ಪ
ಮೂಸಿಕ ವಾಹನ ಮೋದಕ ಪ್ರಿಯನಪ್ಪ
ವಿನಾಯಕನಿವ ಗಣಗಳ ನಾಯಕನಪ್ಪ
ವಿಘ್ನಗಳ ನಿವಾರಿಸೋ ವಿಘ್ನ ವಿನಾಶಕನಪ್ಪ
ಗೌರಿ ಪುತ್ರನು ಈ ಬಾಲ ಗಣಪನು, ಇಲಿಯ ವಾಹನವು ಗಣಪನಿಗೆ ಮೋದಕ ಪ್ರೇಮವೆಂದು, ಎಲ್ಲಾ ಗಣಗಳಿಗೂ ವಿನಾಯಕನೇ ನಾಯಕನೆಂದು, ಮನುಜರಿಗೆ ಎಲ್ಲ ಕಾರ್ಯಗಳಲ್ಲಿ ಬರುವ ವಿಘ್ನಗಳಿಗೆ ನಿವಾರಿಸೋ ವಿನಾಶಕನೆಂದು ಹೇಳಿದ್ದಾರೆ.

“ರಾಮನಬಂಟ'”ಮತ್ತು “ಹರಿಚರಣ”ಪುಟ್ಟ ಕೃಷ್ಣ “,”ತುಳಸಿ “ಇಡುಗುಂಜಿ ಗಣಪ “”ಶಿವಾರ್ಪಣೆ ” ಹಾಗೂ ಈ ಕೃತಿಯ ಹೆಸರು ಮಧುರ ಮೋಹನಮೊದಲಾದವು ದೇವರ ಬಗ್ಗೆ ಬರೆದ ಕವನಗಳು ಇವರ ದೇವರ ಮೇಲಿನ ಶ್ರದ್ದೆ ತೋರಿಸಿಕೊಡುತ್ತದೆ.

ಮಧುರ ಮೋಹನಕವಿತೆಯಲಿ ಎರಡನೇ ಚರಣ ” ಪ್ರಥಮ ಕಾಣಿಕೆ ಮಧುರ ಪ್ರೀತಿಯು ಮೋಹನ ರೂಪದಿಂದ ದ್ವಿಗುಣ ಸಂಭ್ರಮ”ಎಂದಿದೆ. ಇಲ್ಲಿ ಪ್ರೀತಿಯೇ ಮೊದಲ ಕಾಣಿಕೆ ನಮ್ಮ ಬಾಳಿಗೆ ಹಾಗೂ ಕೃಷ್ಣ(ಮೋಹನನಿಂದ )ಸಂಭ್ರಮ ಇಮ್ಮಡಿಯಾಗಿದೆ ಎಂದು ಹೇಳಿದ್ದಾರೆ.

ಪ್ರತಿಯೊಂದು ಕವನಗಳಲ್ಲಿ ಅಕ್ಷರಗಳ ಲಾಲಿತ್ಯವೇ ಹರಿದಾಡಿದೆ.
ಉಳಿದ ಕವನಗಳಲಿ -ಒಲವಿನ ರಂಗೋಲಿ ಹಾಗೂ ಅಂತರಂಗದ ಶೃಂಗಾರ ದಲ್ಲಿ ಭಾವನೆಯ ಸಿಂಗಾರ ಸುಂದರ ಸಾಲುಗಳಿರುವ ಚಂದದ ಕವನಗಳಾಗಿವೆ.
ಎಲ್ಲಾ ರೀತಿಯಲ್ಲಿ ಕವನ ಕೂಡಿದ ಕೃತಿಯಿದು ಮತ್ತು ಸ್ವಪ್ನ ಸುಂದರಿ, ಕರೀಮುಗಿಲು ಗಿರಿ ನವಿಲು ಕವಿತೆ ಸಾಲುಗಳು ತುಂಬಾ ಆಕರ್ಷಕವಾದ ಪದಗಳಿಂದ ಕೂಡಿದೆ.

ಮುಖಪುಟದಿಂದ ಪರಿಚಿತರಾದ ಉತ್ತಮ ಕವಿಯತ್ರಿ ಇವರು.
ಕವಿಯತ್ರಿ, ಬರಹಗಾರ್ತಿಯಾದ ನಳಿನಾ ದ್ವಾರಕ್ ನಾಥ್ ಅವರು ಮೇ ತಿಂಗಳಿನ 21/5/2023ರಂದು ಬೆಂಗಳೂರಿನ ವಿಜಯನಗರದಲ್ಲಿರುವ ಬಿಬಿಎಂಪಿಯ ಶಾಲಾ ಆವರಣದಲ್ಲಿ ಚೊಚ್ಚಲ ಕವನ ಸಂಕಲನ ಕೃತಿಯನ್ನು ಸ್ನೇಹಿ ಕುಟುಂಬದ ವತಿಯಿಂದ ನಡೆದಂತ ಸ್ನೇಹಿ ಸಮ್ಮಿಲನ ಕಾರ್ಯಕ್ರಮದಲ್ಲಿ ಡಾ/ಅನಸೂಯ ಮಂಜುನಾಥ್ ದಂಪತಿಗಳು ಖ್ಯಾತ ಕಾದಂಬರಿ ಕಾರಿಣಿಯಾದಂತ ಶ್ರೀಮತಿ ಆಶಾರಘು ಹಾಗೂ ಮಹಿಳಾ ಸ್ನೇಹಿ ಕುಟುಂಬದ ಸಂಸ್ಥಾಪಕರಾದ ಶ್ರೀಮತಿ ಪ್ರೇಮಾ ಅವರು ಉಪಸಿತ್ಥರಿದ್ದರು.
ಇನ್ನೂ ಹಲವಾರು ಮುಖ್ಯ ಅತಿಥಿಗಳ ಸಮ್ಮಖದಲ್ಲಿ ಕೃತಿಗಳು ಲೋಕಾರ್ಪಣೆಯಾಗಿದ್ದು ವಿಶೇಷವಾಗಿದೆ.

   ಅಂತರಂಗದ ಶೃಂಗಾರ

ಸದಾ ಇರಲಿ ಅಂತರಂಗಕ್ಕೂ ಅಂದ
ಮನಕೆ ಆಗಲೇ ನಿಜವಾದ ಆನಂದ
ಶಾಂತಿ ಪ್ರೀತಿಗಳೇ ಅದರ ಅನುಬಂಧ
ವಿಶ್ವಾಸ ಬೆರೆತಾಗ ಸವಿಯಾದ ಬಂಧ

ಸಂತಸ ತುಂಬಿರಲು ನವ ವಧುವಿನಂತೆ
ಸಂಭ್ರಮ ಸಮಯದಲ್ಲಿ ಉಲ್ಲಾಸವಂತೆ
ಉತ್ಸಾಹ ಉಕ್ಕಿ ಹರುಷವನು ತರುವಂತೆ
ಅಂತರಂಗಕಿರಬೇಕು ಈ ಒಡವೆಗಳಂತೆ

ಸಿಂಗರಿಸಿರುವಂತಹ ಆಭರಣ ಕಾಣದು
ಮೊಗದಲಿ ಬೀರುವ ಮಂದಹಾಸವದು
ನಾಚಿಕೆಯ ಭಾವವೊಂದು ಸಿಂಗಾರವು
ಸಂದರ್ಭಕೆ ಹೊರ ಸೂಸುವ ಲಾವಣ್ಯವು

ಕಲ್ಪನೆಯ ಶೃಂಗಾರ ರಸಧಾರೆ ಹರಿಸುತ
ಅಂತರಂಗವು ಸೌಂದರ್ಯದಿ ನಲಿಯುತ
ಶೋಭಿಸಲಿ ಹಸ್ಮಿತವಾಗಿ ವದನಾರವಿಂದ
ಅಂತರಂಗವಿರಲಿ ಸದಾ ಶೃಂಗಾರದಿಂದ

     ಒಲವಿನ ರಂಗೋಲಿ

ಮನದೊಳು ಮೂಡಿದೆ ಚೆಲುವಿನ ಚಿತ್ತಾರ
ಸವಿಯಲು ಬಯಸಿದೆ ಒಲವ ಝೇಂಕಾರ
ಭಾವಗಳ ಬೆಸೆಯುತ ಬಿಡಿಸಿದೆ ರಂಗೋಲಿ
ನೋಟವು ಕಲೆತಿಹುದು ಚಂದದ ಕಂಗಳಲಿ

ಬಾನಲಿ ಹಾರಲು ಮೂಡುತಿವೆ ರೆಕ್ಕೆಗಳು
ಬಾನಾಡಿಯಂತೆ ತಾ ಹಾರುವ ಯತ್ನಗಳು
ಸುಂದರ ಆಗಸದಲ್ಲಿನ ಚಂದ್ರನ ಅಂದವು
ಸವಿಯುವ ಆಸೆಯು ಹೊಮ್ಮಿದ ಕ್ಷಣವು

ಪ್ರಕೃತಿಯಂದದಿ ಸದಾ ಹಸಿರಿನ ಸಿರಿಯಾಗಿ
ಮನ ಬಯಸುತಿಹುದು ಜೀವಕೆ ಉಸಿರಾಗಿ
ಬಳುಕುತ ಕುಲುಕುತ ಹರಿವ ಜಲಧಾರೆಯಂತೆ
ಸೆಳೆದಿದೆ ಚಿತ್ತವು ಶಾಂತರಸವಾದ ನದಿಯಂತೆ

ಚೆಲುವ ಚಿತ್ತಾರದಿ ಒಲವದು ರಂಗೋಲಿ
ಸುಂದರ ಆಸೆಗಳನು ತುಂಬುತ ಮನದಲಿ
ಮೌನದ ಜೊತೆಯಲಿ ಅವಿತಿಹ ಭಾವವು
ಹೊಸತನ ಚಿಗುರಿಸಿ ಕಳೆದಿದೆ ಸಮಯವು

ರಸ ಋಷಿ ಕುವೆಂಪು

ಮಲೆನಾಡ ಸೀಮೆಯಲ್ಲಿ ಹುಟ್ಟು ಕರುನಾಡಿಗೆ ಸಾಹಿತ್ಯ ಸೇವೆ ಕೊಟ್ಟು ಸಹ್ಯಾದ್ರಿಯ ಸೌಂದರ್ಯ ಸವಿಯುತ ಸುಂದರ ಕಾವ್ಯಧಾರೆಯನ್ನು ಹರಿಸುತ

ರಸಋಷಿಯಾದರು ಕನ್ನಡದ ಕುವರ ಭುವಿಯೊಳು ನಿಮ್ಮ ಹೆಸರು ಅಮರ
ಎನ್ನುತ್ತಾ ನಮ್ಮ ರಾಷ್ಟ್ರಕವಿ ಕುವೆಂಪುರವರ ಬಗ್ಗೆ ಬರೆದಿದ್ದಾರೆ. ಹಚ್ಚಾ ಹಸಿರಿನ ಮಲೆನಾಡಿನ ಸೀಮೆಯಲ್ಲಿ ಹುಟ್ಟಿ, ನಮ್ಮ ಕರ್ನಾಟಕಕ್ಕೆ ಸಾಹಿತ್ಯದ ಸೇವೆಯನ್ನು ಕೊಟ್ಟು, ಸಹ್ಯಾದ್ರಿ ಪರ್ವತದ ಸೌಂದರ್ಯವನ್ನು ಸವಿಯುತ್ತ, ಅವರ ಮನದಿಂದ ಸುಂದರ ಕಾವ್ಯಧಾರೆಯನ್ನು ಹರಿಸುತ್ತಾ ಕುವೆಂಪುರವರು ನಮಗೆ ಸಾಹಿತ್ಯದಲ್ಲಿ ಅಮರನೆಂದು ಹೇಳಿದ್ದಾರೆ.

ಇನ್ನೂ ಚಂದ್ರಿ ಸುಂದ್ರಿಯ ಕವನ ಹಾಸ್ಯಭಾವದಿಂದ ಕೂಡಿದ್ದು ಅದರ ನಾಲ್ಕನೇ ಚರಣದಲ್ಲಿ ” ಅಬ್ಬಾ ಎಷ್ಟೊಂದು ಫಾಸ್ಟ್ ನಮ್ಮ ಚಂದ್ರಿ ಕೆಲಸದವಳನ್ಗೆ ಕಾಣೋದೇ ಇಲ್ಲ ಸುಂದರಿ ಡ್ಯೂಟಿ ಪಾರ್ಲರ್ಗೆ ಹೋಗಲ್ವಂತೆ ಕಣ್ರೀ ಕೇಳಿದರೆ ಹೇಳುತ್ತಾಳೆ ನ್ಯಾಚುರಲ್ ಬಿಡ್ರಿ!!
ಈ ಮೇಲಿನ ಸಾಲುಗಳಲಿ ಕೆಲಸದಾಕೆಯ ಬಗ್ಗೆ ವರ್ಣನೆಯಾಗಿದೆ.
ಹೀಗೆ ವಿಭಿನ್ನ ಕವನಗಳಿಂದ ಕೂಡಿದ ಕೃತಿ ನಳಿನಾ ದ್ವಾರಕನಾಥ್ರವರದು.
ಹೀಗೆ ಇಂತಹ ಹಲವಾರು ವಿಭಿನ್ನ ಶೈಲಿಯ 75 ಕವನಗಳಿರುವ ಮಧುರ ಮೋಹನ ಕವನ ಸಂಕಲನ ಕೃತಿಯ ಪರಿಚಯ ಮಾಡುವ ಅವಕಾಶ ನನಗೆ ದೊರೆತದ್ದು ನನಗೆ ಬಹಳ ಸಂತೋಷವಾಗಿದೆ.
ಈ ಚಂದದ ಕೃತಿಯ ಮುಖಪುಟದ ಒಳಗೆ ಹಾಗೂ ಹೊರಗಿನ ಸಾಹಿತ್ಯಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಕೊಂಡು ಓದಿ ಕವಿಯತ್ರಿಯ ಹರಸಿ ಹಾರೈಸಿ ಎಂದು ಈ ಕವಿ ಪರಿಚಯದ ಬರಹದ ಮೂಲಕ ಶುಭ ಕೋರುವೆನು
ಕವಿಯತ್ರಿ ನಳಿನಾ ದ್ವಾರಕ್ನಾಥ್ ಅವರಿಂದ ಮತ್ತಷ್ಟು ಉತ್ತಮ ಕೃತಿಗಳು ಹೆಚ್ಚಿನ ಸಂಖ್ಯೆಯಲ್ಲಿ ಲೋಕಾರ್ಪಣೆ ಯಾಗಲಿ ನಿಮ್ಮ ಕಾವ್ಯ ಯಾತ್ರೆ ನಿರಂತರ ಮುಂದುವರೆಯಲೆಂದು ಹಾರೈಸುವೆ.


ಸವಿತಾ ಮುದ್ಗಲ್

One thought on “ನಳಿನಾ ದ್ವಾರಕ್ ನಾಥ್-ಮಧುರ ಮೋಹನ

Leave a Reply

Back To Top