ಕಾವ್ಯ ಸಂಗಾತಿ
ಡಾ.ಡೋ.ನಾ. ವೆಂಕಟೇಶ್
ಹಿಂದಿನ ಹಗಲುಳು
ಕಣ್ಣು ಮುಚ್ಚಿದರೆ ರಾತ್ರಿಯೆಲ್ಲಾ
ಹಗಲು
ಕನಸಲ್ಲ ನನಸು
ಎಷ್ಟೆತ್ತರಕ್ಕೇರಿಸಿ ಬಿಟ್ಟೆ
ಚಿನ್ನಾ
ಬಣ್ಣ ಬಣ್ಣದ ಚಿಟ್ಟೆ ಚಿತ್ತಾರ
ಮೇಲೆ ಮುಚ್ಚಿದ ಪಿರಮಿಡ್
ಕೆಳಗೆ ಪ್ರಪಾತ
“ಘನಘೋರ್ ಅಂಧೇರ ,
ಆಗೇ ಭೀ ಜಾನಾ ಹೈ ಮುಷ್ಕಿಲ್”
ಹೀಗೆಯೇ ಕಿಲ್ಲುತ್ತ ಕೊಲ್ಲುತ್ತ
ಬಿಟ್ಟೋಡಿದೆಯಲ್ಲ
ಪುವಾಸಿನಿ!
ಎದೆಗೆಡಲಿಲ್ಲ ಎಡವರಿಸಿದರೂ!
ಖಂಡಾಂತರ ಹಾರದಿದ್ದರೂ ಹಾಡಲಿಲ್ಲ
ಬಾಬ್ಬಿ!
“ಪೀಛೆ ಭೀ ಆನಾ ಹೈ
ಮುಷ್ಕಿಲ್ “
ಈಗೆಲ್ಲ ಹಗಲುಗನಸುಗಳಿಲ್ಲ
ಮೊಸರುಗಲ್ಲದ ಮುದುಕಿ ಮೊನ್ನೆಯ ವಾರದ ಸಂತೆಯ
ದಿನ ವಾರ ದೇಶ ಕಾಲ
ಮರೆತು ಎಷ್ಟು ಕಾಲವಾಗಿತ್ತೋ
ಕಂಡ ತಕ್ಷಣ ತಲೆ ಕೆರೆದು
ಹಗಲಲ್ಲೆ ರಾತ್ರಿಗಳ
ಮಡಚಿದಳು!!
ಆಗಿದ್ದ ಹಗಲು ರಾತ್ರಿಗಳ
ಆಗಲಿಕ್ಕೇ ಆಗದ
ಕನಸುಗಳ ಕಂಡಳು !
ನಿಮ್ಮ ಸುಂದರ ಕವನ ಓದಿ ತುಂಬಾ ಖುಷಿಯಾಯಿತು.
ತುಂಬ ಧನ್ಯವಾದಗಳು.
ಧನ್ಯವಾದಗಳು ಮಂಜುನಾಥ್!